ನವದೆಹಲಿ (ಪಿಟಿಐ): ಜರ್ಮನಿಯ ಮ್ಯನ್ಶನ್ ಗ್ಲಾಡಬಾಕ್‌ನಲ್ಲಿ ನಡೆಯಲಿರುವ ಎಫ್‌ಐಎಚ್ ಹಾಕಿ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲು ಸುಶೀಲಾ ಚಾನು ನೇತೃತ್ವದ 18 ಆಟಗಾರ್ತಿಯರ ಭಾರತದ ಜೂನಿಯರ್ ಮಹಿಳಾ ತಂಡ ಸೋಮವಾರ ಪ್ರವಾಸ ಬೆಳೆಸಿದೆ.
ಜುಲೈ 27 ರಿಂದ ಆಗಸ್ಟ್ 4ರವರೆಗೆ ನಡೆಯಲಿರುವ ಈ ಟೂರ್ನಿಯಲ್ಲಿ, ನ್ಯೂಜಿಲೆಂಡ್, ಆಸ್ಟ್ರೇಲಿಯಾ ಹಾಗೂ ರಷ್ಯಾ ದೇಶಗಳೊಂದಿಗೆ ಭಾರತ ತಂಡ `ಸಿ' ಗುಂಪಿನಲ್ಲಿದೆ.
ತಂಡ ಇಂತಿದೆ: ಗೋಲ್ ಕೀಪರ್‌ಗಳು: ಸನಾರಿಕ್ ಚಾನು, ಬಿಗನ್ ಸೋಯ್. ರಕ್ಷಣಾ ಆಟಗಾರ್ತಿಯರು: ಪಿಂಕಿ ದೇವಿ, ದೀಪ್ ಗ್ರೇಸ್ ಎಕ್ಕಾ, ನಮಿತಾ ತೊಪ್ಪೊ, ಮಂಜಿತ್ ಕೌರ್, ಎಂ.ಎನ್.ಪೊನ್ನಮ್ಮ, ಸುಶೀಲಾ ಚಾನು (ನಾಯಕಿ) ಹಾಗೂ ಮೊನಿಕಾ.
ಮಿಡ್‌ಫಿಲ್ಡರ್ಸ್: ಲಿಲ್ಲಿ ಚಾನು, ಲಿಲಿಮಾ ಮಿಂಜ್, ನವಜೋತ್ ಕೌರ್, ವಂದನಾ ಕಟಾರಿಯ ಹಾಗೂ ರಿತುಷಾ ಆರ್ಯ. ಫಾರ್ವರ್ಡ್ ಆಟಗಾರ್ತಿಯರು: ಪೂನಂ ರಾಣಿ, ರಾಣಿ (ಉಪ ನಾಯಕಿ), ಅನುಪಾ ಬರ್ಲಾ ಹಾಗೂ ನವನೀತ್ ಕೌರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.