ADVERTISEMENT

ಜೈನ್‌ ಕಾಲೇಜು ತಂಡಕ್ಕೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2017, 19:37 IST
Last Updated 8 ಡಿಸೆಂಬರ್ 2017, 19:37 IST
ವಿಜಯ ಅಂತರ ಕಾಲೇಜು ಕ್ರಿಕೆಟ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಶ್ರೀ ಭಗವಾನ್‌ ಮಹಾವೀರ ಜೈನ್‌ ಕಾಲೇಜು, ವಿ.ವಿ.ಪುರಂ ತಂಡದವರು (ನಿಂತವರು, ಎಡದಿಂದ) ಮಿತೇಶ್‌, ನಿಶಿತ್‌, ಪ್ರಣವ್‌, ರೋಹನ್‌ ಶೆಟ್ಟಿ, ತುಷಾರ್‌, ಸೋನಿತ್‌, ರುಷಿಕೇಶ್‌, ವಿಘ್ನೇಶ್‌, ವಿಪ್ಲವ್‌ ಮತ್ತು ಧೀರಿನ್‌. (ಕುಳಿತವರು, ಎಡದಿಂದ) ಆಯುಷ್‌, ಸಿ.ಸುರೇಶ್‌ (ಸಹಾಯಕ ಕ್ರೀಡಾ ಶಿಕ್ಷಣ ನಿರ್ದೇಶಕ), ಯು.ವಿ.ಶಂಕರ್‌ (ಕ್ರೀಡಾ ನಿರ್ದೇಶಕ) ಮತ್ತು ರೋಹನ್‌ ನಾಯಕರ್‌ (ನಾಯಕ). (ಮಂಡಿಯೂರಿ ಕುಳಿತವರು) ವಿಶಾಲ್‌ ಮತ್ತು ರೋಹನ್‌ ನವೀನ್‌

ಬೆಂಗಳೂರು: ನಾಯಕ ರೋಹನ್‌ ನಾಯಕರ್‌ (71) ಅವರ ಅಮೋಘ ಬ್ಯಾಟಿಂಗ್‌ ಬಲದಿಂದ ಶ್ರೀ ಭಗವಾನ್‌ ಮಹಾವೀರ ಜೈನ್‌ ಕಾಲೇಜು, ವಿ.ವಿ.ಪುರಂ ತಂಡದವರು ವಿಜಯ ಅಂತರ ಕಾಲೇಜು ಕ್ರಿಕೆಟ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಫೈನಲ್‌ನಲ್ಲಿ ಜೈನ್‌ ಕಾಲೇಜು 23ರನ್‌ಗಳಿಂದ ಜೆ.ಸಿ. ರಸ್ತೆಯ ಜೈನ್‌ ಕಾಲೇಜು ತಂಡವನ್ನು ಮಣಿಸಿತು.

ಸಂಕ್ಷಿಪ್ತ ಸ್ಕೋರ್‌

ಜೈನ್‌ ಕಾಲೇಜು, ವಿ.ವಿ.ಪುರಂ: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 173 (ರೋಹನ್‌ ನಾಯಕರ್‌ 71, ರೋಹನ್‌ ನವೀನ್‌ 45, ರಿತ್ವಿಕ್‌ 30ಕ್ಕೆ3).

ADVERTISEMENT

ಜೈನ್‌ ಕಾಲೇಜು, ಜೆ.ಸಿ.ರಸ್ತೆ: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 150 (ಅಯೆವಂತ್‌ 36; ರೋಹನ್‌ ಶೆಟ್ಟಿ 24ಕ್ಕೆ2).

ಫಲಿತಾಂಶ: ಜೈನ್‌ ಕಾಲೇಜು ವಿ.ವಿ. ಪುರಂ ತಂಡಕ್ಕೆ 23ರನ್‌ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.