ADVERTISEMENT

ಜೊನಾಥನ್‌ ಶತಕ

​ಪ್ರಜಾವಾಣಿ ವಾರ್ತೆ
Published 30 ಮೇ 2018, 19:30 IST
Last Updated 30 ಮೇ 2018, 19:30 IST

ಬೆಂಗಳೂರು: ಆರ್‌. ಜೊನಾಥನ್‌ ಅವರ ಅಮೋಘ ಶತಕದ ನೆರವಿನಿಂದ ಮಿರ್ಜಾ ಇಸ್ಮೈಲ್‌ ಶೀಲ್ಡ್‌ಗಾಗಿ ನಡೆಯುತ್ತಿರುವ ಕೆಎಸ್‌ಸಿಎ ಆಶ್ರಯದ ಗುಂಪು ಒಂದರ ಡಿವಿಷನ್‌ ಒಂದರ ಸ್ವಸ್ತಿಕ್‌ ಯೂನಿಯನ್‌ ಕ್ರಿಕೆಟ್‌ ಕ್ಲಬ್‌ (1) ಹಾಗೂ ಸ್ವಸ್ತಿಕ್‌ ಯೂನಿಯನ್‌ ಕ್ರಿಕೆಟ್‌ ಕ್ಲಬ್‌ (2) ನಡುವಣ ಕ್ರಿಕೆಟ್‌ ಪಂದ್ಯವು ಡ್ರಾ ಆಗಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಸ್ವಸ್ತಿಕ್‌ ಯೂನಿಯನ್‌ ಕ್ರಿಕೆಟ್‌ ಕ್ಲಬ್‌ (1) ಮೊದಲ ಇನಿಂಗ್ಸ್‌ನಲ್ಲಿ 100 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 421 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತು. ಆರ್‌. ಜೊನಾಥನ್‌ (ಔಟಾಗದೆ 103, 103 ಎಸೆತ, 7 ಸಿಕ್ಸರ್‌, 4 ಬೌಂಡರಿ) ಹಾಗೂ ಆರ್‌. ಸಮರ್ಥ್‌ ಅವರು ಶತಕ (100, 196 ಎಸೆತ, 10 ಬೌಂಡರಿ) ದಾಖಲಿಸಿದರು.

ಮೊದಲ ಇನಿಂಗ್ಸ್‌ನಲ್ಲಿ ಸ್ವಸ್ತಿಕ್‌ ಯೂನಿಯನ್‌ ಕ್ರಿಕೆಟ್‌ ಕ್ಲಬ್‌ (2) ತಂಡವು 63.1 ಓವರ್‌ಗಳಲ್ಲಿ 223 ರನ್‌ ಗಳಿಸಿ ಆಲೌಟಾಯಿತು. ತಂಡದ ಅಮಿತ್‌ ವರ್ಮಾ ಶತಕ (104, 134 ಎಸೆತ, 2 ಸಿಕ್ಸರ್‌, 12 ಬೌಂಡರಿ) ಗಳಿಸಿದರು.

ADVERTISEMENT

ಸಂಕ್ಷಿಪ್ತ ಸ್ಕೋರ್‌: ಸ್ವಸ್ತಿಕ್‌ ಯೂನಿಯನ್‌ ಕ್ರಿಕೆಟ್‌ ಕ್ಲಬ್‌ (1): ಮೊದಲ ಇನಿಂಗ್ಸ್‌: 100 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 421 (ಆರ್‌. ಸಮರ್ಥ್‌ 100, ಜೊನಾಥನ್‌ ಆರ್‌. ಔಟಾಗದೆ 103, ಕೆ. ವಿ. ಸಿದ್ಧಾರ್ಥ್‌ 46, ಮಿತ್ರಾಕಾಂತ್‌ ಸಿಂಗ್‌ ಯಾದವ್‌ 13ಕ್ಕೆ 3). ಸ್ವಸ್ತಿಕ್‌ ಯೂನಿಯನ್‌ ಕ್ರಿಕೆಟ್‌ ಕ್ಲಬ್‌ (2): ಮೊದಲ ಇನಿಂಗ್ಸ್‌: 63.1 ಓವರ್‌ಗಳಲ್ಲಿ 223 (ಅಮಿತ್‌ ವರ್ಮಾ 104, ಸಿ. ಎ. ಕಾರ್ತಿಕ್‌ 23, ಎಸ್‌. ಎಸಲಲ. ಅಕ್ಷಯ್‌ 56ಕ್ಕೆ 2, ಟಿ. ಪ್ರದೀಪ್‌ 23ಕ್ಕೆ 4). ಫಲಿತಾಂಶ: ಪಂದ್ಯ ಡ್ರಾ.

ವಲ್ಚರ್ಸ್‌ ಕ್ರಿಕೆಟ್‌ ಕ್ಲಬ್‌: ಮೊದಲ ಇನಿಂಗ್ಸ್‌: 72.4 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 303 (ನಿತಿನ್‌ ಭಿಲ್ಲೆ 89, ಎನ್‌. ಜಿ. ಸುಜೀತ್‌ 79, ಆನಂದ ದೊಡ್ಡಮನಿ 24ಕ್ಕೆ 2, ಎಸ್‌. ಪ್ರಶಾಂತ್‌ 70ಕ್ಕೆ 2). ಮೌಂಟಿ ಜಾಯ್‌ ಕ್ರಿಕೆಟ್‌ ಕ್ಲಬ್‌: ಮೊದಲ ಇನಿಂಗ್ಸ್‌: 28 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 100 (ಎ. ಪಿ. ಅಭಿಷೇಕ್‌ ಔಟಾಗದೆ 32, ಎ. ಎಂ. ಕಿರಣ್‌ ಔಟಾ ಗದೆ 55). ಫಲಿತಾಂಶ: ಪಂದ್ಯ ಡ್ರಾ.

ಹೆರಾನ್ಸ್‌ ಕ್ರಿಕೆಟ್‌ ಕ್ಲಬ್‌: ಮೊದಲ ಇನಿಂಗ್ಸ್‌: 41.1 ಓವರ್‌ಗಳಲ್ಲಿ 128 (ಪ್ರದೀಪ್‌ ಗಂಗಾಧರ್‌ 54, ಕೆ. ಎಸ್‌. ದೆವಯ್ಯ 31ಕ್ಕೆ 2, ಎಸ್‌. ಕಿಶನ್‌ ಬಿದರೆ 42ಕ್ಕೆ 5). ಎರಡನೇ ಇನಿಂಗ್ಸ್‌: 13 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 34. ಜವಾಹರ್‌ ಸ್ಪೋರ್ಟ್ಸ್‌ ಕ್ಲಬ್‌ (1): ಮೊದಲ ಇನಿಂಗ್ಸ್‌: 61 ಓವರ್‌ಗಳಲ್ಲಿ 232 (ಕೆ. ಸಿ. ಅವಿನಾಶ್‌ 115, ಸೌರಭ್‌ ಯಾದವ್‌ 33ಕ್ಕೆ 2, ಪ್ರದೀಪ್‌ ಗಂಗಾಧರ್‌ 42ಕ್ಕೆ 2, ಸಾದಿಕ್‌ ಕಿರ್ಮಾನಿ 39ಕ್ಕೆ 3). ಫಲಿತಾಂಶ: ಪಂದ್ಯ ಡ್ರಾ.

ಫ್ರೆಂಡ್ಸ್‌ ಯೂನಿಯನ್‌ ಕ್ರಿಕೆಟ್‌ ಕ್ಲಬ್‌ (1): ಮೊದಲ ಇನಿಂಗ್ಸ್‌: 60.1 ಓವರ್‌ಗಳಲ್ಲಿ 215 (ಬಿ. ಯು. ಶಿವಕುಮಾರ್‌ 26, ಎನ್‌. ವಿನಯ್‌ ಸಾಗರ್‌ 42, ಮಿಥುನ್‌ ಭಟ್‌ 50, ಶ್ರೀ ಕೃಷ್ಣ 22, ಮಹೇಶ್‌ ವಧ್ವಾನಿ 68ಕ್ಕೆ 3, ಎಸ್‌. ಸೂರಜ್‌ 53ಕ್ಕೆ 4). ಸರ್‌ ಸೈಯದ್‌ ಕ್ರಿಕೆಟರ್ಸ್‌: ಮೊದಲ ಇನಿಂಗ್ಸ್‌: 56.5 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 219 (ಕ್ರಾಂತಿ ಕುಮಾರ್‌ 74, ಬಿ. ಎ. ಮೋಹಿತ್‌ 81, ಪಿ. ಡಿ. ನಿತೀಶ್‌ 53ಕ್ಕೆ 2). ಫಲಿತಾಂಶ: ಪಂದ್ಯ ಡ್ರಾ.

ಸೋಷಿಯಲ್‌ ಕ್ರಿಕೆಟರ್ಸ್‌: ಮೊದಲ ಇನಿಂಗ್ಸ್‌: 66 ಓವರ್‌ಗಳಲ್ಲಿ 211 (ಕೆ. ಶಶೀಂದ್ರ 52, ಎಸ್‌. ರಕ್ಷಿತ್‌ 35, ಅಭಿಷೇಕ್‌ ಭಟ್‌ 27ಕ್ಕೆ 3, ಅಮರ್‌ ಮಹಾವೀರ್‌ ಘಾಲೆ 15ಕ್ಕೆ 2). ಎರಡನೇ ಇನಿಂಗ್ಸ್‌: 25 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 187 ಡಿಕ್ಲೇರ್ಡ್‌ (ಎಂ. ಡಿ. ತಹಾ 60, ಎಸ್‌. ರಕ್ಷಿತ್‌ ಔಟಾಗದೆ 56). ಜವಾನ್ಸ್‌ ಕ್ರಿಕೆಟ್‌ ಕ್ಲಬ್‌: ಮೊದಲ ಇನಿಂಗ್ಸ್‌: 46.1 ಓವರ್‌ಗಳಲ್ಲಿ 148 (ನಿಹಾಲ್‌ ಉಳ್ಳಾಲ 41, ರಿತೇಶ್‌ ಭಟ್ಕಲ್‌ 42ಕ್ಕೆ 5). ಎರಡನೇ ಇನಿಂಗ್ಸ್‌: 45 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 115 (ನಿಶಾಂತ್‌ ಸಿಂಗ್‌ ಶೇಖಾವತ್‌ ಔಟಾಗದೆ 52, ದಿಕ್ಷಾಂಶು ನೇಗಿ 37ಕ್ಕೆ 4). ಫಲಿತಾಂಶ: ಪಂದ್ಯ ಡ್ರಾ.

ಬೆಂಗಳೂರು ಯುನೈಟೆಡ್‌ ಕ್ರಿಕೆಟ್‌ ಕ್ಲಬ್‌ (1): ಮೊದಲ ಇನಿಂಗ್ಸ್‌: 100 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 236 (ಲಿಯಾನ್‌ ಖಾನ್‌ 90, ಶರತ್‌ ಶ್ರೀನಿವಾಸ್‌ 69, ಡಿ. ಅವಿನಾಶ್‌ 49ಕ್ಕೆ 4). ಬೆಂಗಳೂರು ಒಕೆಷನಲ್ಸ್‌: ಮೊದಲ ಇನಿಂಗ್ಸ್‌: 58 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 240 (ಶ್ರೀಕರ ಔಟಾಗದೆ 117). ಫಲಿತಾಂಶ: ಪಂದ್ಯ ಡ್ರಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.