ADVERTISEMENT

ಟಿಟಿ ಪದಾಧಿಕಾರಿಗಳ ಆಯ್ಕೆಯಲ್ಲಿ ಗದ್ದಲ: ಚುನಾವಣೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2012, 19:30 IST
Last Updated 19 ಫೆಬ್ರುವರಿ 2012, 19:30 IST

ಬೆಂಗಳೂರು: ಕರ್ನಾಟಕ ರಾಜ್ಯ ಟೇಬಲ್ ಟೆನಿಸ್ ಸಂಸ್ಥೆ (ಕೆಎಸ್‌ಟಿಟಿಎ) ಪದಾಧಿಕಾರಿಗಳ ಆಯ್ಕೆಯ ಚುನಾವಣೆ ಯಲ್ಲಿ ನಾಟಕೀಯ ಬೆಳವಣಿಗೆ ಕಂಡು ಬಂದಿತು. ಇದರಿಂದ ಕೊನೆಗೆ ಚುನಾವಣೆ ಯನ್ನೇ ಮುಂದೂಡಲಾಯಿತು.

ಅಧ್ಯಕ್ಷ (1), ಉಪಾಧ್ಯಕ್ಷ (5), ಕಾರ್ಯದರ್ಶಿ (1), ಜಂಟಿ ಕಾರ್ಯದರ್ಶಿ (2), ಖಜಾಂಚಿ (1) ಸ್ಥಾನಗಳಿಗೆ ಭಾನುವಾರ ಚುನಾವಣೆ ನಿಗದಿಯಾಗಿತ್ತು. ಇದಕ್ಕೂ ಮುನ್ನ ರಾಜ್ಯದ 19 ಜಿಲ್ಲೆಗಳ ಟೇಬಲ್ ಟೆನಿಸ್ ಸಂಸ್ಥೆಗಳ ಪದಾಧಿಕಾರಿಗಳ ಸಭೆ ಜರುಗಿತು. ಇದರ ನಂತರ ನಿವೃತ್ತ ಐಎಎಸ್ ಅಧಿಕಾರಿ ಜೆ. ಅಲೆಕ್ಸಾಂಡರ್ ಅಧ್ಯಕ್ಷರಾಗಿ ಮರು ಆಯ್ಕೆಯೂ ಆದರು. ನಂತರ ನಡೆದ್ದ್ದಿದೆಲ್ಲಾ ಕೇವಲ ಮಾತಿನ ಚಕಮಕಿ!

2007ರಲ್ಲಿ ಕೆಎಸ್‌ಟಿಟಿಎ ಮಧ್ಯಂ ತರ ಸಮಿತಿ (ಅಡ್ ಹಾಕ್) ರಚಿಸ ಲಾಗಿತ್ತು. ಎರಡು ವರ್ಷಗಳ ಹಿಂದೆಯೇ ಚುನಾವಣೆ ನಡೆಯಬೇಕಿತ್ತು. ಇದು ವಿಳಂಬವಾದ ಕಾರಣ ಭಾನುವಾರ ನಗರದ ಬಸವನಗುಡಿ ಯೂತ್ ಕ್ಲಬ್‌ನಲ್ಲಿ ಚುನಾವಣೆ ನಿಗದಿಯಾಗಿತ್ತು. ಆದರೆ, ಎಷ್ಟು ಸದಸ್ಯರು ಮತ ಚಲಾವಣೆ ಮಾಡಬೇಕು ಎನ್ನುವ ವಿಷಯದ್ಲ್ಲಲಿ ಉಂಟಾದ ಗೊಂದಲದಿಂದ ಈ ಪ್ರಕ್ರಿಯೆಯನ್ನೇ ಕೈಬಿಡಲಾಯಿತು.

ADVERTISEMENT

`ಮತದಾನ ಮಾಡಲು 16 ಜಿಲ್ಲೆಗಳ ಅಧ್ಯಕ್ಷರು ಅಥವಾ ಕಾರ್ಯದರ್ಶಿಗಳಿಗೆ ಮಾತ್ರ ಅವಕಾಶವಿದೆ. ಉಡುಪಿ, ದಕ್ಷಿಣ ಕನ್ನಡ ಹಾಗೂ ದಾವಣಗೆರೆ ಜಿಲ್ಲೆಗಳ ಸದಸ್ಯರಿಗೆ ಅವಕಾಶವಿಲ್ಲ. ಏಕೆಂದರೆ, ಮಧ್ಯಂತರ ಸಮಿತಿ ಇದ್ದಾಗ ಅವರಿಗೆ ಮತದಾನದ ಅವಕಾಶ ನೀಡಲಾಗಿದೆ~ ಎಂದು ಕೆಲವರು ವಾದಿಸಿದರು. `ಈ ಮೂರು ಜಿಲ್ಲೆಗಳ ಸದಸ್ಯರು ಸಹ ಸಾಕಷ್ಟು ಟೂರ್ನಿಗಳನ್ನು ನಡೆಸಿ ಸ್ಪರ್ಧಿಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಅಷ್ಟೇ ಅಲ್ಲ, ಮತದಾರರ ಪಟ್ಟಿಯಲ್ಲಿ ಅವರ ಹೆಸರೂ ಇದೆ. ಆದ್ದರಿಂದ ಅವರಿಗೂ ಮತದಾನದ ಅವಕಾಶ ನೀಡಬೇಕು~ ಎಂದು ಇನ್ನೂ ಕೆಲವರು ಪಟ್ಟು ಹಿಡಿದರು. 

 `ಹೆಚ್ಚು ಟೂರ್ನಿ ನಡೆಸಿ ಸ್ಪರ್ಧಿಗಳಿಗೆ ಪ್ರೋತ್ಸಾಹ ನೀಡಬೇಕಾಗಿತ್ತು. ವಿನಾಕಾರಣ ಗೊಂದಲದಿಂದ ಯಾರಿಗೂ ಪ್ರಯೋಜನವಿಲ್ಲ~ ಎಂದು ಕೆಲ ಸದಸ್ಯರು `ಪ್ರಜಾವಾಣಿ~ಎದುರು ಅಸಮಾಧಾನ ತೋಡಿಕೊಂಡರು.

`ಎಷ್ಟು ಸದಸ್ಯರು ಮತ ಚಲಾಯಿಸಬೇಕು ಎಂದು ಗೊಂದಲ ಉಂಟಾಗಿದೆ. ನಮಗೆ ನೀಡಿದ ಪಟ್ಟಿಯ ಪ್ರಕಾರ 19 ಸದಸ್ಯರಿಗೆ ಮತದಾನದ ಅವಕಾಶವಿದೆ. ಆದ್ದರಿಂದ ಈ ಪ್ರಕ್ರಿಯೆಯನ್ನು ರದ್ದು ಮಾಡಲಾಗಿದೆ~ ಎಂದು ಚುನಾವಣಾ ಧಿಕಾರಿ ಕೆ.ಎಸ್. ಶಿವಪ್ರಸಾದ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.