ADVERTISEMENT

ಟೆನಿಸ್‌: ಫೈನಲ್‌ನಲ್ಲಿ ಎಡವಿದ ರೋಹನ್‌- ಐಸಾಮ್‌

​ಪ್ರಜಾವಾಣಿ ವಾರ್ತೆ
Published 11 ಜನವರಿ 2014, 19:30 IST
Last Updated 11 ಜನವರಿ 2014, 19:30 IST
ಸಿಡ್ನಿ ಇಂಟರ್‌ನ್ಯಾಷನಲ್‌ ಟೆನಿಸ್‌ ಟೂರ್ನಿಯ ‘ರನ್ನರ್‌ ಅಪ್‌’ ಪ್ರಶಸ್ತಿಯೊಂದಿಗೆ ಐಸಾಮ್‌ (ಎಡ) ಮತ್ತು ರೋಹನ್‌ ಬೋಪಣ್ಣ 	–ಎಎಫ್‌ಪಿ ಚಿತ್ರ
ಸಿಡ್ನಿ ಇಂಟರ್‌ನ್ಯಾಷನಲ್‌ ಟೆನಿಸ್‌ ಟೂರ್ನಿಯ ‘ರನ್ನರ್‌ ಅಪ್‌’ ಪ್ರಶಸ್ತಿಯೊಂದಿಗೆ ಐಸಾಮ್‌ (ಎಡ) ಮತ್ತು ರೋಹನ್‌ ಬೋಪಣ್ಣ –ಎಎಫ್‌ಪಿ ಚಿತ್ರ   

ಸಿಡ್ನಿ (ಪಿಟಿಐ): ರೋಹನ್‌ ಬೋಪಣ್ಣ ಮತ್ತು ಐಸಾಮ್‌ ಉಲ್‌ ಹಕ್‌ ಖುರೇಷಿ ಜೋಡಿ ಇಲ್ಲಿ ಕೊನೆಗೊಂಡ ಸಿಡ್ನಿ ಇಂಟರ್‌ನ್ಯಾಷನಲ್‌ ಟೆನಿಸ್‌ ಟೂರ್ನಿಯಲ್ಲಿ ‘ರನ್ನರ್‌ ಅಪ್‌’ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಶನಿವಾರ ನಡೆದ ಪುರುಷರ ಡಬಲ್ಸ್‌ ವಿಭಾಗದ ಫೈನಲ್‌ನಲ್ಲಿ ಭಾರತ- ಪಾಕ್‌ ಜೋಡಿಯನ್ನು 7-6, 7-6ರ ನೇರ ಸೆಟ್‌ಗಳಿಂದ ಮಣಿಸಿದ ಡೇನಿಯಲ್‌ ನೆಸ್ಟರ್‌ ಮತ್ತು ನೆನಾದ್‌ ಜಿಮೋಂಜಿಕ್‌ ಕಿರೀಟ ಮುಡಿಗೇರಿಸಿಕೊಂಡರು.

ಪೊಟ್ರೊ ಚಾಂಪಿಯನ್‌: ಅರ್ಜೆಂಟೀನಾದ ಜುವಾನ್‌ ಮಾರ್ಟಿನ್‌ ಡೆಲ್‌ ಪೊಟ್ರೊ ಇದೇ ಟೂರ್ನಿಯ ಸಿಂಗಲ್ಸ್‌ ವಿಭಾಗದಲ್ಲಿ ಚಾಂಪಿಯನ್‌ ಆದರು. ಶನಿವಾರ ನಡೆದ ಫೈನಲ್‌ನಲ್ಲಿ ಅವರು 6-3, 6-1 ರಲ್ಲಿ ಆಸ್ಟ್ರೇಲಿಯಾದ ಬರ್ನಾರ್ಡ್‌ ಟೊಮಿಕ್‌ ವಿರುದ್ಧ ಸುಲಭ ಗೆಲುವು ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.