
ಪ್ರಜಾವಾಣಿ ವಾರ್ತೆನವದೆಹಲಿ: ಭಾರತದ ಶರ್ಮದಾ ಬಾಲು ಹಾಗೂ ಚೀನಾದ ಸಿರುಯಿ ಹೆ ಅವರಿ ಸ್ಪೇನ್‌ನಲ್ಲಿ ನಡೆದ 10 ಸಾವಿರ ಡಾಲರ್ ಬಹುಮಾನ ಮೊತ್ತದ ಐಟಿಎಫ್ ಟೆನಿಸ್ ಟೂರ್ನಿಯ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಸೋಲು ಕಂಡಿದ್ದಾರೆ.
ಫೈನಲ್‌ನಲ್ಲಿ ಶರ್ಮದಾ-ಸಿರುಯಿ 4-6, 3-6ರಲ್ಲಿ ಕರೊಲಿನ್ ಡೇನಿಯಲ್ಸ್ ಹಾಗೂ ಯುಗೆನಿಯಾ ಪಾಶ್ಕೋವಾ ಎದುರು ಪರಾಭವಗೊಂಡರು.ಬೆಂಗಳೂರಿನ ಶರ್ಮದಾ ಅವರ ಜೊತೆಗಾರ್ತಿ ಸಿರುಯಿ ಸೆಮಿಫೈನಲ್‌ನಲ್ಲಿ 7-5, 6-4ರಲ್ಲಿ ಅಗ್ರ ಶ್ರೇಯಾಂಕದ ಇಸಾಬೆಲ್ ರಪಿಸರ್ದಾ ಹಾಗೂ ಅನಾಸ್ತೇಸಿಯಾ ಯಕಿಮೊವಾ ಅವರಿಗೆ ಆಘಾತ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.