ADVERTISEMENT

ಟೆನಿಸ್‌: ಮುಗ್ಗರಿಸಿದ ವಾವ್ರಿಂಕ

ಏಜೆನ್ಸೀಸ್
Published 28 ಮೇ 2018, 19:30 IST
Last Updated 28 ಮೇ 2018, 19:30 IST

ಪ್ಯಾರಿಸ್‌: ಸ್ವಿಟ್ಜರ್‌ಲೆಂಡ್‌ನ ಆಟಗಾರ ಸ್ಟಾನಿಸ್ಲಾಸ್‌ ವಾವ್ರಿಂಕ ಅವರು ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯ ಮೊದಲ ಸುತ್ತಿನಲ್ಲಿ ಸೋತಿದ್ದಾರೆ.

ಸೋಮವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಹಣಾಹಣಿಯಲ್ಲಿ ಸ್ಪೇನ್‌ನ ಗುಯಿಲ್ಲೆರ್ಮೊ ಗಾರ್ಸಿಯಾ ಲೊಪೆಜ್‌ 6–2, 3–6, 4–6, 7–6, 6–3ರಲ್ಲಿ ವಾವ್ರಿಂಕ ಅವರಿಗೆ ಆಘಾತ ನೀಡಿದರು. ಎರಡು ಮತ್ತು ಮೂರನೇ ಸೆಟ್‌ನಲ್ಲಿ ಪ್ರಾಬಲ್ಯ ಮೆರೆದ ವಾವ್ರಿಂಕ ನಂತರ ಮಂಕಾದರು.

ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಶುಭಾರಂಭ ಮಾಡಿದರು. ಅವರು 6–3, 6–4, 6–4ರಲ್ಲಿ ರೊಜೇರಿಯೊ ದುತ್ರಾ ಸಿಲ್ವಾ ಅವರನ್ನು ಮಣಿಸಿದರು.

ADVERTISEMENT

ಜೊಕೊವಿಚ್‌ ಅವರು ಮೂರು ಸೆಟ್‌ಗಳಲ್ಲೂ ಮಿಂಚಿನ ಆಟ ಆಡಿ ಸಿಲ್ವಾ ಅವರ ಸವಾಲು ಮೀರಿದರು.

ಇತರ ಪಂದ್ಯಗಳಲ್ಲಿ ಸ್ಟೆಫಾನೊಸ್‌ ಸಿಟ್ಸಿಪಸ್‌ 7–5, 6–7, 6–4, 6–3ರಲ್ಲಿ ಕಾರ್ಲೊ ತಬೆರ್‌ನರ್‌ ಎದುರೂ, ಬೆನೊಯಿಟ್‌ ಪೇರೆ 6–3, 6–7, 7–6, 6–1ರಲ್ಲಿ ರಾಬರ್ಟೊ ಕಾರ್ಬಲ್ಲೆಸ್‌ ವಿರುದ್ಧವೂ ಗೆದ್ದರು.

ಮಹಿಳೆಯರ ವಿಭಾಗದ ಆರಂಭಿಕ ಸುತ್ತಿನ ಪಂದ್ಯಗಳಲ್ಲಿ ಕ್ಯಾಥರಿನಾ ಸಿನಿಯಾಕೊವಾ 7–5, 7–5ರಲ್ಲಿ ವಿಕ್ಟೋರಿಯಾ ಅಜರೆಂಕಾ ಎದುರೂ, ಮ್ಯಾಡಿಸನ್‌ ಕೀಸ್‌ 6–3, 6–3ರಲ್ಲಿ ಸವಿಯಾ ವಿಕೆರಿ ಮೇಲೂ, ಪೆಟ್ರಾ ಕ್ವಿಟೋವಾ 3–6, 6–1, 7–5ರಲ್ಲಿ ವೆರೋನಿಕಾ ಸೆಪೆಡ್‌ ಎದುರೂ ವಿಜಯಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.