ADVERTISEMENT

ಟೆನಿಸ್: ಸೆಮಿಫೈನಲ್‌ಗೆ ರುಷ್ಮಿ-ಅಂಕಿತಾ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2012, 19:30 IST
Last Updated 21 ಮಾರ್ಚ್ 2012, 19:30 IST

ಬೆಂಗಳೂರು: ಕೈರಾ ಶ್ರಾಫ್ ಭಾರತದ ಟೆನಿಸ್ ಪ್ರೇಮಿಗಳ ಆಸೆಯನ್ನು ಜೀವಂತವಾಗಿರಿಸಿದ್ದಾರೆ. ಉದ್ಯಾನನಗರಿಯಲ್ಲಿ ನಡೆಯುತ್ತಿರುವ ಕ್ಯೂನೆಟ್ ಐಟಿಎಫ್ ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಎರಡನೇ ಸುತ್ತಿನ ಪಂದ್ಯದಲ್ಲಿ ಅವರು ಗೆಲುವು ಸಾಧಿಸಿದರು.

ಕೆಎಸ್‌ಎಲ್‌ಟಿಎ ಕೋರ್ಟ್‌ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಕೈರಾ 6-3, 6-3ನೇರ ಸೆಟ್‌ಗಳಿಂದ ಇಟಲಿಯ ನಿಕೋಲೆ ಕ್ಲಿರಿಕೊ ಎದುರು ಗೆಲುವು ಸಾಧಿಸಿದರು. ಸಿಂಗಲ್ಸ್‌ನಲ್ಲಿ ಕಣದಲ್ಲಿರುವ ಏಕೈಕ ಆತಿಥೇಯ ಆಟಗಾರ್ತಿಯಾಗಿದ್ದಾರೆ.

ಸಿಂಗಲ್ಸ್ ವಿಭಾಗದ ಇತರ ಪಂದ್ಯಗಳಲ್ಲಿ ಅಸ್ಟ್ರಿಯಾದ ಮೆಲಾನಿಯಾ ಕ್ಲಿಫ್‌ನೆರ್ 6-3, 2-6, 6-0ರಲ್ಲಿ ಸರ್ಬಿಯಾದ ಜೊವಾನಾ ಜಾಸ್ಕಿಸ್ ಮೇಲೂ, ಬಲ್ಗೇರಿಯಾದ ತಮರಿನ್ ಹೆಂಡ್ಲರ್ 6-4, 6-1ರಲ್ಲಿ ಇಸ್ರೇಲ್‌ನ ಕೆರಾನ್ ಶಿಲಾಮೊ ವಿರುದ್ಧವೂ ಜಯ ಸಾಧಿಸಿದರು.

ಸೆಮಿಫೈನಲ್‌ಗೆ ರುಷ್ಮಿ-ಅಂಕಿತಾ:
ಭಾರತದ ರುಷ್ಮಿ ಚಕ್ರವರ್ತಿ ಹಾಗೂ ಅಂಕಿತಾ ರೈನಾ ಡಬಲ್ಸ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದರು. ಈ ಜೋಡಿ ಕ್ವಾರ್ಟರ್ ಫೈನಲ್‌ನಲ್ಲಿ 7-6, 6-3ರಲ್ಲಿ ಇಟಲಿಯ ಮಾರ್ಟಿನಾ ಸಿಕೊಟ್ಟಿ-ಎಜ್ನಿಸ್ ಜುಸಿಚೈನಿ ಎದುರು ಗೆಲುವು ಪಡೆದರು.

ಡಬಲ್ಸ್ ವಿಭಾಗದ ಇನ್ನೊಂದು ಎಂಟರ ಘಟ್ಟದ ಪಂದ್ಯದಲ್ಲಿ ಸರ್ಬಿಯಾದ ತಮರಾ ಕಾರ್ವಿಕ್ ಹಾಗೂ ಭಾರತದ ರಿಷಿಕಾ ಸುಂಕರ ನಿರಾಸೆ ಕಂಡರು. ಬೆಲ್ಜಿಯಂನ ತಮರಿನ್ ಹೆಂಡ್ಲರ್-ಮೆಲಾನಿಯಾ ಕ್ಲಿಫ್‌ನೆರ್ 6-4, 6-4ರಲ್ಲಿ ಕಾರ್ವಿಕ್-ರಿಷಿಕಾ ಎದುರು ಗೆಲುವು ಪಡೆದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.