ADVERTISEMENT

ಡಚ್‌ ಸೈಕಲ್‌ ಸ್ಪರ್ಧಿಯ ಹೊಸ ವಿಶ್ವ ದಾಖಲೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2013, 19:59 IST
Last Updated 18 ಸೆಪ್ಟೆಂಬರ್ 2013, 19:59 IST

ಲಂಡನ್‌ (ಪಿಟಿಐ):ಪ್ರತಿ ಗಂಟೆಗೆ 133.78 ಕಿ.ಮೀ ವೇಗದಲ್ಲಿ ದೂರವನ್ನು ಕ್ರಮಿಸುವ ಮೂಲಕ  ನೆದರ್‌ಲೆಂಡ್‌ನ  23 ವರ್ಷದ ಯುವ ಸೈಕಲ್‌ ಸ್ಪರ್ಧಿ­ಯೊಬ್ಬ ಹೊಸ ವಿಶ್ವ ದಾಖಲೆ ಬರೆದಿದ್ದಾನೆ.

ಆಮ್‌ಸ್ಟರ್‌ಡಾಮ್‌ ವಿಶ್ವವಿದ್ಯಾಲಯ ಮತ್ತು ಡೆಲ್ಫ್ಟ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ವಿಶೇಷವಾಗಿ ವಿನ್ಯಾಸಗೊಳಿಸಿದ ಸೈಕಲ್‌ ಮೇಲೆ ಸೆಬಾಸ್ಟಿನ್‌ ಬೌವಿಯರ್‌ ಎಂಬ ಯುವಕ ಈ ಹೊಸ ಸಾಧನೆ ಮಾಡಿದ್ದಾನೆ.

ಈ ಹಿಂದೆ ಕೆನಡಾದ ಸ್ಯಾಮ್‌ ವಿಟ್ಟಿಂಗ್‌ಹ್ಯಾಮ್‌ ಅವರ ಹೆಸರಿನಲ್ಲಿದ್ದ ದಾಖಲೆ ಮುರಿಯುವ ಮೂಲಕ ಸೆಬಾಸ್ಟಿನ್‌ ವಿಶ್ವದ ಅತ್ಯಂತ ವೇಗದ ಸೈಕಲ್‌ ಸ್ಪರ್ಧಿ ಎಂಬ ದಾಖಲೆಯನ್ನು ತನ್ನ ಹೆಸರಿಗೆ ವಗಾರ್ಯಿಸಿಕೊಂಡಿದ್ದಾನೆ.

ಭಾರಿ ವೇಗದಲ್ಲಿ ಬೀಸುತ್ತಿದ್ದ ಗಾಳಿ ಹಾಗೂ ಪ್ರತಿಕೂಲ ಹವಾಮಾನದ ನಡುವೆಯೂ ವಿಟ್ಟಿಂಗ್‌ಹ್ಯಾಮ್‌ ಅವರಿಗಿಂತ ಸೆಬಾಸ್ಟಿನ್‌ ಪ್ರತಿ ಗಂಟೆಗೆ 0.6ಕಿ.ಮೀ ಹೆಚ್ಚು ವೇಗದಲ್ಲಿ ಸೈಕಲ್‌ ಓಡಿಸಿದ್ದಾರೆ.

ಪ್ರತಿ ಗಂಟೆಗೆ 127.43 ಕಿ.ಮೀ ವೇಗದಲ್ಲಿ ಸೈಕಲ್‌ ಓಡಿಸಿದ ಅವರದೇ ತಂಡದ ವಿಲ್‌ ಬಾಸೆಲ್‌ಮನ್ಸ್ ಮೂರನೇ ಸ್ಥಾನ ಪಡೆದಿದ್ದಾರೆ. ಅಮೆರಿಕದ ನೆವಡಾ ಮರುಭೂಮಿಯಲ್ಲಿ ಈ ಸ್ಪರ್ಧೆ ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.