ADVERTISEMENT

ಡಿವೈಎಸ್‌ಎಸ್‌ಗೆ ನಗದು ಬಹುಮಾನ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2012, 19:30 IST
Last Updated 1 ಆಗಸ್ಟ್ 2012, 19:30 IST

ಬೆಂಗಳೂರು: ಬಿಡಿಎಫ್‌ಎ ಆಶ್ರಯದ `ಎ~ ಡಿವಿಷನ್ ಲೀಗ್ ಫುಟ್‌ಬಾಲ್ ಚಾಂಪಿಯನ್‌ಷಿಪ್ ಗೆದ್ದುಕೊಂಡ ಡಿವೈಎಸ್‌ಎಸ್ `ಎ~ ತಂಡಕ್ಕೆ ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆ (ಕೆಎಸ್‌ಎಫ್‌ಎ) ವತಿಯಿಂದ ರೂ. 30 ಸಾವಿರ ನಗದು ಬಹುಮಾನ ನೀಡಲಾಯಿತು.

ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಕೆಎಸ್‌ಎಫ್‌ಎ ಅಧ್ಯಕ್ಷ ಎ.ಆರ್. ಖಲೀಲ್ ವಿಜೇತ ತಂಡಕ್ಕೆ ಚೆಕ್ ನೀಡಿದರು. ಕ್ರೀಡಾ ಸಚಿವ ಅಪ್ಪಚ್ಚು ರಂಜನ್ ಅವರು ಟ್ರೋಫಿ ವಿತರಿಸಿದರು. `ರನ್ನರ್ ಅಪ್~ ಆರ್‌ಡಬ್ಲ್ಯುಎಫ್ ತಂಡ ರೂ. 20 ಸಾವಿರ ನಗದು ಬಹುಮಾನ ಪಡೆಯಿತು.
 
12 ತಂಡಗಳು ಪಾಲ್ಗೊಂಡಿದ್ದ ಲೀಗ್‌ನಲ್ಲಿ ಡಿವೈಎಸ್‌ಎಸ್ 28 ಪಾಯಿಂಟ್ ಕಲೆಹಾಕಿ ಅಗ್ರಸ್ಥಾನ ತನ್ನದಾಗಿಸಿಕೊಂಡಿತ್ತು.

ವೈಯಕ್ತಿಕ ಪ್ರಶಸ್ತಿ: ಶ್ರೇಷ್ಠ ಆಟಗಾರ: ಸುಜಿತ್ (ಇಸ್ರೋ), ಉದಯೋನ್ಮುಖ ಆಟಗಾರ: ಎಡ್ವಿನ್ (ಡಿವೈಎಸ್‌ಎಸ್), ಗರಿಷ್ಠ ಸ್ಕೋರರ್: ಉಮಾಶಂಕರ್ (ಆರ್‌ಬಿಐ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.