ADVERTISEMENT

ಡೈನಾಮೊಸ್‌ಗೆ ಜಯದ ಕನಸು

ಪಿಟಿಐ
Published 5 ಡಿಸೆಂಬರ್ 2017, 19:33 IST
Last Updated 5 ಡಿಸೆಂಬರ್ 2017, 19:33 IST
ಡೆಲ್ಲಿ ಡೈನಾಮೊಸ್‌ ಎಫ್‌ಸಿ ಆಟಗಾರರು ಗೆಲುವಿನ ವಿಶ್ವಾಸದಲ್ಲಿದ್ದಾರೆ
ಡೆಲ್ಲಿ ಡೈನಾಮೊಸ್‌ ಎಫ್‌ಸಿ ಆಟಗಾರರು ಗೆಲುವಿನ ವಿಶ್ವಾಸದಲ್ಲಿದ್ದಾರೆ   

ನವದೆಹಲಿ: ಸತತ ಎರಡು ಸೋಲುಗಳಿಂದ ಮೈ ಕೊಡವಿ ನಿಂತಿರುವ ಡೆಲ್ಲಿ ಡೈನಾಮೊಸ್‌ ತಂಡ ಈಗ ಜಯದ ಮಂತ್ರ ಜಪಿಸುತ್ತಿದೆ.

ಬುಧವಾರದ ಪಂದ್ಯದಲ್ಲಿ ಡೈನಾಮೊಸ್‌, ಜೇಮ್‌ಷೆಡ್‌ಪುರ ಎಫ್‌ಸಿ ವಿರುದ್ಧ ಸೆಣಸಲಿದೆ.

ಎಫ್‌ಸಿ ಪುಣೆ ಸಿಟಿ ವಿರುದ್ಧ ಗೆದ್ದು ಅಭಿಯಾನ ಆರಂಭಿಸಿದ್ದ ಡೆಲ್ಲಿ ತಂಡ ಆ ನಂತರದ ಪಂದ್ಯಗಳಲ್ಲಿ ಬೆಂಗಳೂರು ಎಫ್‌ಸಿ ಮತ್ತು ನಾರ್ತ್‌ಈಸ್ಟ್‌ ಯುನೈಟೆಡ್‌ ಎಫ್‌ಸಿ ವಿರುದ್ಧ ಸೋತಿತ್ತು.

ADVERTISEMENT

ಮುಖ ಗವಸು ಧರಿಸಿ ಅಭ್ಯಾಸ: ವಾಯು ಮಾಲಿನ್ಯದ ಕಾರಣ ಡೈನಾಮೊಸ್‌ ಮತ್ತು ಜೇಮ್‌ಷೆಡ್‌ಪುರ ತಂಡಗಳ ಕೆಲ ಆಟಗಾರರು ಮಂಗಳವಾರ ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ಮುಖ ಗವಸು ಧರಿಸಿ ಅಭ್ಯಾಸ ನಡೆಸಿದರು.

‘ಅಭ್ಯಾಸದ ವೇಳೆ ಮುಖ ಗವಸು ಧರಿಸಿದ್ದರು. ಆದರೆ ಪಂದ್ಯದ ದಿನ ಯಾರೂ  ಇದನ್ನು ಹಾಕುವುದಿಲ್ಲ’ ಎಂದು ಡೆಲ್ಲಿ ತಂಡದ ಮುಖ್ಯ ಕೋಚ್‌ ಮಿಗುಯೆಲ್‌ ಏಂಜೆಲ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.