ADVERTISEMENT

ದಕ್ಷಿಣ ಆಫ್ರಿಕಾಕ್ಕೆ ಚೊಚ್ಚಲ ಪ್ರಶಸ್ತಿ

ಜೂನಿಯರ್‌ ವಿಶ್ವಕಪ್‌ ಕ್ರಿಕೆಟ್: ಪ್ರಶಸ್ತಿಯ ಹೊಸ್ತಿಲಲ್ಲಿ ಮುಗ್ಗರಿಸಿದ ಪಾಕಿಸ್ತಾನ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2014, 19:30 IST
Last Updated 1 ಮಾರ್ಚ್ 2014, 19:30 IST

ದುಬೈ (ಪಿಟಿಐ): ಪಾಕಿಸ್ತಾನ ನೀಡಿದ್ದ ಅಲ್ಪ ಮೊತ್ತದ ಗುರಿಯನ್ನು ಸುಲಭವಾಗಿ ಮುಟ್ಟಿದ ದಕ್ಷಿಣ ಆಫ್ರಿಕಾ ತಂಡ 19 ವರ್ಷದೊಳಗಿನವರ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ ಗೆದ್ದುಕೊಂಡಿತು.

ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಆರು ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.

ಟಾಸ್‌ ಗೆದ್ದ ಪಾಕ್‌ ತಂಡ ಮೊದಲು ಬ್ಯಾಟ್‌್ ಮಾಡಲು ನಿರ್ಧರಿಸಿತು. ಆದರೆ , ದಕ್ಷಿಣ ಆಫ್ರಿಕಾ ತೋರಿದ ಕರಾರುವಾ ಕ್ಕಾದ ದಾಳಿಯ ಮುಂದೆ ಪರದಾಡಿ 44.3 ಓವರ್‌ಗಳಲ್ಲಿ 131 ರನ್‌ಗಳ ನ್ನಷ್ಟೇ ಕಲೆ ಹಾಕಲು ಶಕ್ತವಾಯಿತು. ಈ ಸುಲಭ ಗುರಿಯನ್ನು ಆಫ್ರಿಕಾ 42.1 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು ತಲುಪಿತು. ದಕ್ಷಿಣ ಆಫ್ರಿಕಾ 2002 ಮತ್ತು 2008ರಲ್ಲಿ ಫೈನಲ್‌ ಪ್ರವೇಶಿಸಿತ್ತು. ಆದರೆ, ಕ್ರಮವಾಗಿ ಇಂಗ್ಲೆಂಡ್‌ ಮತ್ತು ಭಾರತ ವಿರುದ್ಧ ನಿರಾಸೆ ಕಂಡಿತ್ತು. ಆದರೆ, ಮೂರನೇ ಬಾರಿ ಫೈನಲ್‌ ತಲುಪಿದಾಗ ನಿರಾಸೆಗೆ ಅವಕಾಶ ನೀಡಲಿಲ್ಲ.

ಪಾಕ್ ತಂಡ ಜೂನಿಯರ್‌ ವಿಶ್ವಕಪ್‌ ನಲ್ಲಿ ವೆಸ್ಟ್‌ ಇಂಡೀಸ್‌್ (2004) ಮತ್ತು ಭಾರತ  (2006)  ವಿರುದ್ಧ ಪ್ರಶಸ್ತಿ ಜಯಿಸಿತ್ತು. ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಕಾರಣ ಮೂರನೇ ಸಲ ಪ್ರಶಸ್ತಿ ಗೆಲ್ಲುವ ಕನಸು ನನಸಾಗಲಿಲ್ಲ.

ಸಂಕ್ಷಿಪ್ತ ಸ್ಕೋರು: ಪಾಕಿಸ್ತಾನ 44.3 ಓವರ್‌ಗಳಲ್ಲಿ 131. (ಸಮಿ ಅಸ್ಲಾಮ್‌ 16, ಇಮಾಮ್‌ ಉಲ್‌ ಹಕ್‌ 12, ಹಸನ್‌ ರಾಜಾ 15, ಅಮೀರ್‌ ಹಮ್ಜಾ 12, ಜಾಫರ್‌ ಗೊಹರ್‌ 22, ಅಮದ್‌ ಬಟ್‌್ ಔಟಾಗದೆ 37; ಜಸ್ಟಿನ್‌ ಡಿಲ್‌್ 29ಕ್ಕೆ2, ಕಾರ್ಬಿನ್‌ ಬಾಷ್‌ 15ಕ್ಕೆ4, ಯಾಸೀನ್‌ ವಿಲ್ಲಾ 19ಕ್ಕೆ2).
ದಕ್ಷಿಣ ಆಫ್ರಿಕಾ 42.1 ಓವರ್‌ಗಳಲ್ಲಿ 4 ವಿಕೆಟ್‌ಗೆ 134. (ಅಡಿಯನ್‌ ಮರ್ಕರಮ್‌ ಔಟಾಗದೆ 66, ಜಾಸನ್‌ ಸ್ಮಿತ್‌ 9, ಗ್ರೇಗ್‌ ಓಲ್ಡ್‌ಫೀಲ್ಡ್‌್ 40, ಬ್ರೆಡ್ಲಿ ಡೈಲ್‌ ಔಟಾಗದೆ 14; ಜಿಯಾ ಉಲ್‌ ಹಕ್‌ 27ಕ್ಕೆ1, ಅಮದ್‌ ಬಟ್‌ 30ಕ್ಕೆ1, ಕರಾಮತ್‌ ಅಲಿ 24ಕ್ಕೆ2)
ಫಲಿತಾಂಶ: ದಕ್ಷಿಣ ಆಫ್ರಿಕಾಕ್ಕೆ ಆರು ವಿಕೆಟ್‌ ಗೆಲುವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.