ADVERTISEMENT

ದಲ್ವಿಂದರ್, ಮಹಕ್ ಚಾಂಪಿಯನ್‌

ಫೆನೆಸ್ಟಾ ರಾಷ್ಟ್ರೀಯ ಟೆನಿಸ್ ಚಾಂಪಿಯನ್‌ಷಿಪ್‌

ಪಿಟಿಐ
Published 7 ಅಕ್ಟೋಬರ್ 2017, 20:12 IST
Last Updated 7 ಅಕ್ಟೋಬರ್ 2017, 20:12 IST

ನವದೆಹಲಿ: ದಲ್ವಿಂದರ್ ಸಿಂಗ್‌ ಹಾಗೂ ಮಹಕ್ ಜೈನ್ ಶನಿವಾರ ಇಲ್ಲಿ ಮುಕ್ತಾಯಗೊಂಡ ಫೆನೆಸ್ಟಾ ರಾಷ್ಟ್ರೀಯ ಟೆನಿಸ್ ಚಾಂಪಿಯನ್‌ಷಿಪ್‌ ನಲ್ಲಿ ಚಾಂಪಿಯನ್ ಆಗಿದ್ದಾರೆ.

ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ದಲ್ವಿಂದರ್‌ 6–3, 6–4ರಲ್ಲಿ ನೇರ ಸೆಟ್‌ಗಳಿಂದ ಸೂರಜ್ ಪ್ರಬೋಧ್‌ ಅವರನ್ನು ಮಣಿಸಿದರು.

ಇಂದೋರ್‌ನ ಮಹಕ್‌ ಮಹಿಳೆಯರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ 7–5, 6–3ರಲ್ಲಿ ಜೀಲ್ ದೇಸಾಯಿ ಅವರನ್ನು ಮಣಿಸಿದರು. ಒತ್ತಡ ಇಲ್ಲದೆ ಆಡಿದ ಅವರು ಅಪೂರ್ವ ಸಾಮರ್ಥ್ಯದಿಂದ ಎದುರಾಳಿಯ ಸ್ಮ್ಯಾಷ್‌ ಮತ್ತು ರಿಟರ್ನ್ಸ್‌ಗಳಿಗೆ ತಕ್ಕ ಉತ್ತರ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.