ADVERTISEMENT

ದಾಖಲೆ ಬರೆದ ಲಿಯಾಂಡರ್‌ ಪೇಸ್‌

ಪಿಟಿಐ
Published 7 ಏಪ್ರಿಲ್ 2018, 19:30 IST
Last Updated 7 ಏಪ್ರಿಲ್ 2018, 19:30 IST
ದಾಖಲೆ ಬರೆದ ಲಿಯಾಂಡರ್‌ ಪೇಸ್‌
ದಾಖಲೆ ಬರೆದ ಲಿಯಾಂಡರ್‌ ಪೇಸ್‌   

ತಂಜಿನ್‌: ಡೇವಿಸ್ ಕಪ್‌ ಡಬಲ್ಸ್ ವಿಭಾಗದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ದಾಖಲೆಯನ್ನು ಭಾರತದ ಲಿಯಾಂಡರ್ ಪೇಸ್ ತಮ್ಮದಾಗಿಸಿಕೊಂಡರು. ಇಲ್ಲಿ ನಡೆಯುತ್ತಿರುವ ಚೀನಾ ವಿರುದ್ಧದ ವಲಯ ಮಟ್ಟದ ಪಂದ್ಯದ ಎರಡನೇ ದಿನ ಅವರು ಈ ಸಾಧನೆ ಮಾಡಿದರು.

ಕರ್ನಾಟದ ರೋಹನ್ ಬೋಪಣ್ಣ ಅವರೊಂದಿಗೆ ಕಣಕ್ಕೆ ಇಳಿದ ಪೇಸ್‌ ಎದುರಾಳಿ ತಂಡದ ಮೋ ತ್ಸಿಂಗ್ ಗಾಂಗ್‌ ಮತ್ತು ಜೀ ಜಾಂಗ್ ಅವರನ್ನು 5–7, 7–6 (5) ಮತ್ತು 7–6 (3)ರಿಂದ ಮಣಿಸಿದರು. ಇದು ಅವರ 43ನೇ ಗೆಲುವು ಆಗಿದೆ.

ಪೇಸ್‌–ಬೋಪಣ್ಣ ಜೋಡಿಯ ಅಮೋಘ ಸಾಧನೆಯ ಬಲದಿಂದ ದಿನದ ಮೂರೂ ಹಣಾಹಣಿಗಳಲ್ಲಿ ಗೆದ್ದ ಭಾರತ 3–2 ಜಯದೊಂದಿಗೆ ವಿಶ್ವ ಗುಂಪು ಹಂತದ ಪ್ಲೇ ಆಫ್‌ ಹಂತಕ್ಕೆ ಲಗ್ಗೆ ಇರಿಸಿತು.

ADVERTISEMENT

ಮೊದಲ ದಿನವಾದ ಶುಕ್ರವಾರ ಭಾರತದ ರಾಮಕುಮಾರ್ ರಾಮನಾಥನ್ ಮತ್ತು ಸುಮಿತ್ ನಗಾಲ್‌ ಸಿಂಗಲ್ಸ್ ವಿಭಾಗಗಳಲ್ಲಿ ಸೋತಿದ್ದರು. ಹೀಗಾಗಿ ಶನಿವಾರದ ಎಲ್ಲ ಪಂದ್ಯಗಳನ್ನು ಗೆಲ್ಲಬೇಕಾದ ಒತ್ತಡಕ್ಕೆ ಭಾರತ ತಂಡ ಸಿಲುಕಿತ್ತು.

ದಿನದ ಮೊದಲ ಹಣಾಹಣಿಯಲ್ಲಿ ಪೇಸ್ ಮತ್ತು ಬೋಪಣ್ಣ ಗಳಿಸಿಕೊಟ್ಟ ಜಯದ ಬೆಂಬಲದೊಂದಿಗೆ ಕಣಕ್ಕೆ ಇಳಿದ ರಾಮಕುಮಾರ್ ರಾಮನಾಥನ್ ಅವರು ಡಿ ವು ವಿರುದ್ಧ 7–6 (4), 6–3ರಿಂದ ಗೆದ್ದು 2–2ರಿಂದ ಸಮಬಲ ಮಾಡಿಕೊಂಡರು. ನಿರ್ಣಾಯಕ ಕೊನೆಯ ಹಣಾ‌ಹಣಿಯಲ್ಲಿ ‍ಪ್ರಜ್ಞೇಶ್‌ ಗುಣೇಶ್ವರನ್‌ ಗೆದ್ದು ಭಾರತ ಪಾಳಯದಲ್ಲಿ ಸಂಭ್ರಮ ಮೂಡಿಸಿದರು. ಅವರು ಯಿಬಿಂಗ್ ವೂ ಎದುರು 6–4, 6–2ರಿಂದ ಗೆದ್ದರು.

**

ರೋಹಣ್‌ ಬೋಪಣ್ಣ ಜೊತೆ ಕಣಕ್ಕೆ ಇಳಿದ ಲಿಯಾಂಡರ್ ಪೇಸ್‌

ಮೋ ತ್ಸಿಂಗ್ ಗಾಂಗ್‌–ಜೀ ಜಾಂಗ್ ಅವರನ್ನು ಮಣಿ
ಸಿದ ಭಾರತದ ಜೋಡಿ

3–2ರಿಂದ ಗೆದ್ದು ವಿಶ್ವ ಗುಂಪು ಪ್ಲೇ ಆಫ್‌ಗೆ ಲಗ್ಗೆ ಇಟ್ಟ ಭಾರತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.