ADVERTISEMENT

ದಿವಿಜ್- ರಾಜಾಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2012, 19:30 IST
Last Updated 7 ನವೆಂಬರ್ 2012, 19:30 IST

ಲಾಫ್‌ಬರೋ, ಬ್ರಿಟನ್ (ಪಿಟಿಐ): ಭಾರತದ ಡೇವಿಸ್ ಕಪ್ ಆಟಗಾರ ದಿವಿಜ್ ಶರಣ್ ಹಾಗೂ ಅವರ ಜೊತೆಗಾರ ಪುರವ್ ರಾಜಾ ಇಲ್ಲಿ ನಡೆಯುತ್ತಿರುವ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

ಇಲ್ಲಿ ನಾಲ್ಕನೇ ಶ್ರೇಯಾಂಕ ಪಡೆದಿರುವ ಭಾರತದ ಜೋಡಿ ಮೊದಲ ಸುತ್ತಿನ ಪಂದ್ಯದಲ್ಲಿ 6-4, 6-4 ರಲ್ಲಿ ಐರ್ಲೆಂಡ್‌ನ ಜೇಮ್ಸ ಕ್ಲಸ್ಕಿ ಮತ್ತು ನ್ಯೂಜಿಲೆಂಡ್‌ನ ಮಾರ್ಕಸ್ ಡೇನಿಯಲ್ ವಿರುದ್ಧ ಜಯ ಪಡೆಯಿತು.

ದಿವಿಜ್ ಮತ್ತು ರಾಜಾ ಎಂಟರಘಟ್ಟದ ಪಂದ್ಯದಲ್ಲಿ ಬೆಲ್ಜಿಯಂನ ನೀಲ್ಸ್ ಡೆಸೆನ್ ಹಾಗೂ ಜರ್ಮನಿಯ ಪೀಟರ್ ಟೊರೆಕೊ ಅವರ ಸವಾಲನ್ನು ಎದುರಿಸುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.