ನವದೆಹಲಿ: ಮಹೇಶ್ ಭೂಪತಿ ಮತ್ತು ರೋಹನ್ ಬೋಪಣ್ಣ ಅವರು ಲಂಡನ್ ಒಲಿಂಪಿಕ್ಸ್‌ನಲ್ಲಿ ಜೊತೆಯಾಗಿ ಆಡಲು ಮುಂದಾಗಿರುವುದರಿಂದ ಲಿಯಾಂಡರ್ ಪೇಸ್ ಇದೀಗ `ಏಕಾಂಗಿ~ಯಾಗಿದ್ದಾರೆ. ಒಲಿಂಪಿಕ್ಸ್‌ಗೆ ಭಾರತದ ಎರಡನೇ ತಂಡವನ್ನು ಕಳುಹಿಸುವುದು ಸರಿಯಾದ ಕ್ರಮವಲ್ಲ ಎಂದು ಎಐಟಿಎಗೆ ಪತ್ರ ಬರೆದಿರುವ ಅವರು ತಿಳಿಸಿದ್ದಾರೆ.
`ಭೂಪತಿ ಮತ್ತು ರೋಹನ್ ಒಲಿಂಪಿಕ್ಸ್‌ನಲ್ಲಿ ನನ್ನ ಜೊತೆ ಆಡವುದಿಲ್ಲ ಎಂಬ ಮಾಹಿತಿಯನ್ನು ನನಗೆ ನೀಡಲಾಗಿದೆ. ಇದು ದುರದೃಷ್ಟಕರ. ಏಕೆಂದರೆ ಈ ಹಿಂದೆ ನಾವು ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ ದೇಶಕ್ಕಾಗಿ ಒಟ್ಟಾಗಿ ಆಡಿದ್ದೆವು. ಡೇವಿಸ್ ಕಪ್ ಟೂರ್ನಿಗಳಲ್ಲಿ ಯಶಸ್ಸು ಸಾಧಿಸಿದ್ದೆವು~ ಎಂದು ಪೇಸ್ ಪತ್ರದಲ್ಲಿ ನುಡಿದಿದ್ದಾರೆ.
`ಒಲಿಂಪಿಕ್ಸ್‌ಗೆ ಭಾರತದ ಇನ್ನೊಂದು ತಂಡವನ್ನು ಕಳಿಸುವುದು ಸರಿಯಲ್ಲ. ಹಾಗಾದಲ್ಲಿ ನಾನು ರ‌್ಯಾಂಕಿಂಗ್‌ನಲ್ಲಿ ಕೆಳಗಿನ ಸ್ಥಾನದಲ್ಲಿರುವ ಆಟಗಾರನ ಜೊತೆ ಆಡಬೇಕಾಗುತ್ತದೆ~ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.