ADVERTISEMENT

ಧ್ರುವ್‌, ಸಬೀನಾಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2013, 19:30 IST
Last Updated 14 ಡಿಸೆಂಬರ್ 2013, 19:30 IST
ರಾಷ್ಟ್ರೀಯ ಟೆನ್‌ ಪಿನ್‌ ಬೌಲಿಂಗ್‌ ಲೀಗ್‌ನಲ್ಲಿ ಅಗ್ರಸ್ಥಾನ ಪಡೆದ ತಮಿಳುನಾಡಿನ ಸಬೀನಾ ಅತಿಕಾ ಮತ್ತು ದೆಹಲಿಯ ಧ್ರುವ ಸರ್ದಾ
ರಾಷ್ಟ್ರೀಯ ಟೆನ್‌ ಪಿನ್‌ ಬೌಲಿಂಗ್‌ ಲೀಗ್‌ನಲ್ಲಿ ಅಗ್ರಸ್ಥಾನ ಪಡೆದ ತಮಿಳುನಾಡಿನ ಸಬೀನಾ ಅತಿಕಾ ಮತ್ತು ದೆಹಲಿಯ ಧ್ರುವ ಸರ್ದಾ   

ಬೆಂಗಳೂರು: ತಮಿಳುನಾಡಿನ ಸಬೀನಾ ಅತಿಕಾ ಮತ್ತು ದೆಹಲಿಯ ಧ್ರುವ ಸರ್ದಾ ಇಲ್ಲಿ ನಡೆಯುತ್ತಿರುವ 25ನೇ ರಾಷ್ಟ್ರೀಯ ಟೆನ್‌ ಪಿನ್‌ ಬೌಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಗೆಲುವು ಪಡೆದರು.

ಈ ಮೂಲಕ ಇವರು ನಾಕೌಟ್‌ ಹಂತದಲ್ಲಿ ‘ಪೋಲ್‌ ಪೋಸಿಷೆನ್‌’ ಪಡೆದುಕೊಂಡಿದ್ದಾರೆ. ಸಬೀನಾ 1512 ಪಾಯಿಂಟ್‌ಗಳನ್ನು ಕಲೆ ಹಾಕಿದ್ದಾರೆ. ಕರ್ನಾಟಕದ ಪೂಜಾ ಹೆಗ್ಡೆ 1263 ಪಾಯಿಂಟ್‌ ಹೊಂದಿದ್ದು ಎರಡನೇ ಸ್ಥಾನ ಕಾಯ್ದುಕೊಂಡಿದ್ದಾರೆ.

ಪುರುಷರ ವಿಭಾಗದಲ್ಲಿ ಧ್ರುವ್ 1773 ಮತ್ತು ತಮಿಳುನಾಡಿನ ಶಬ್ಬೀರ್‌ ಧನ್ಕೋಟ್‌ ಕ್ರಮವಾಗಿ ಮೊದಲ ಎರಡು ಸ್ಥಾನ ಹೊಂದಿದ್ದಾರೆ.
ನಾಕೌಟ್‌ ಹಂತದ ಅರ್ಹತಾ ಸುತ್ತಿನ ಫಲಿತಾಂಶ: ಪುರುಷರ ವಿಭಾಗ: ಧ್ರುವ್‌ ಸರ್ದಾ (ಒಟ್ಟು 6683)–1, ಶಬ್ಬೀರ್‌ ಧನ್ಕೋಟ್‌ (6,535)–2, ಆಕಾಶ್‌ ಅಶೋಕ್‌ ಕುಮಾರ್‌ (6,303)–3, ಗಿರೀಶ್‌ ಗಾಬಾ (6,176)–4.

ಮಹಿಳಾ ವಿಭಾಗ: ಸಬೀನಾ (ಒಟ್ಟು 3,835)–1, ಪೂಜಾ ಹೆಗ್ಡೆ (3,465)–2, ಜೂಡ್‌ ಅಲ್ಬನ್‌ (3,388)–3, ಸುಗಂಧಾ ಸರ್ದಾ (3,362)–4.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.