ADVERTISEMENT

ನಮ್ಮ ನಡುವೆ ಉತ್ತಮ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2011, 19:30 IST
Last Updated 13 ಫೆಬ್ರುವರಿ 2011, 19:30 IST

ಬೆಂಗಳೂರು (ಪಿಟಿಐ):  ಆರು ವರ್ಷಗಳ ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡ ಅಟಗಾರ ಸುರೇಶ್ ರೈನಾ. ಹಲವು ಸಲ ತಂಡದಿಂದ ಹೊರಬಿದ್ದಿದ್ದಾರೆ. ಅವಕಾಶ ಸಿಕ್ಕಾಗ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ.

ವಿಶ್ವಕಪ್ ಟೂರ್ನಿಯಲ್ಲಿ ಸ್ಥಾನ ಪಡೆದಿರುವ ಈ ಎಡಗೈ ಬ್ಯಾಟ್ಸ್‌ಮನ್‌ಗೆ ಅಂತಿಮ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳವುದರ ಬಗ್ಗೆ ಯಾವುದೇ ಖಚಿತತೆ ಇಲ್ಲ.ಏಕೆಂದರೆ ವಿರಾಟ್ ಕೊಹ್ಲಿ ಮತ್ತು ಯೂಸುಫ್ ಪಠಾಣ್ ಅವರು ಅಂತಿಮ ಇಲೆವೆನ್‌ನಲ್ಲಿ ತಮ್ಮ ಸ್ಥಾನವನ್ನು ಹೆಚ್ಚುಕಡಿಮೆ ಖಚಿತಪಡಿಸಿಕೊಂಡಿದ್ದಾರೆ.

ಯಾವುದಾದರೂ ಬ್ಯಾಟ್ಸ್‌ಮನ್ ಗಾಯಗೊಂಡು ಆಡದಿದ್ದರೆ ಮಾತ್ರ ರೈನಾಗೆ ಅಂತಿಮ ಬಳಗದಲ್ಲಿ ಸ್ಥಾನ ಲಭಿಸಬಹುದು. ಆದರೆ ಪ್ರತಿಭಾನ್ವಿತ ಬ್ಯಾಟ್ಸ್‌ಮನ್‌ನ್ನು ತಂಡದಿಂದ ಹೊರಗಿಡುವ ನಿರ್ಧಾರ  ಮಹೇಂದ್ರ ಸಿಂಗ್ ದೋನಿ ಅವರಿಗೆ ಕೈಗೊಳ್ಳುವುದು ಕೂಡಾ ಸುಲಭವಲ್ಲ.

ರೈನಾ ಅವರಿಗೆ ಅಂತಿಮ ಇಲೆವೆನ್‌ನಲ್ಲಿ ಕಾಣಿಸಿಕೊಳ್ಳಲು ಪಠಾಣ್ ಮತ್ತು ಕೊಹ್ಲಿ ಜೊತೆ ಸ್ಪರ್ಧೆ ನಡೆಸಬೇಕಾಗಿದೆ. ಆದರೆ ಅವರು ಇದನ್ನು ಧನಾತ್ಮಕವಾಗಿ ಕಂಡಿದ್ದಾರೆ. ‘ತಂಡದಲ್ಲಿ ಕೊಹ್ಲಿ, ಪಠಾಣ್ ಹಾಗೂ ನನ್ನ ನಡುವೆ ಆರೋಗ್ಯಕರ ಸ್ಪರ್ಧೆ ಏರ್ಪಟ್ಟಿದೆ. ಇದು ಒಳ್ಳೆಯ ಬೆಳವಣಿಗೆ’ ಎಂದು ರೈನಾ ಭಾನುವಾರ ಹೇಳಿದರು.
‘ಆದರೆ ಕ್ರೀಸ್‌ನಲ್ಲಿದ್ದ ಎಲ್ಲ ಸಂದರ್ಭಗಳಲ್ಲೂ ತಂಡವನ್ನು ಗೆಲುವಿನತ್ತ ಮುನ್ನಡೆಸಲು ಪ್ರಯತ್ನಿಸುವೆ’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.