ADVERTISEMENT

ನರಿಂದರ್‌ ಬಾತ್ರಾಗೆ ದಂಡ ವಿಧಿಸಿದ ಎಫ್‌ಐಎಚ್‌

ಪಿಟಿಐ
Published 24 ಏಪ್ರಿಲ್ 2018, 18:30 IST
Last Updated 24 ಏಪ್ರಿಲ್ 2018, 18:30 IST

ಲಾಸನ್ನೆ : ಇಂಗ್ಲೆಂಡ್‌ನ ಕಾನೂನು ಅಧಿಕಾರಿಗಳ ಕ್ರಮವನ್ನು ಟೀಕಿಸಿದ್ದ ಭಾರತ ಒಲಿಂಪಿಕ್ಸ್‌ ಸಂಸ್ಥೆಯ (ಐಒಎ) ಅಧ್ಯಕ್ಷ ನರಿಂದರ್‌ ಬಾತ್ರಾ ಅವರಿಗೆ ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ (ಎಫ್‌ಐಎಚ್‌) ಮಂಗಳವಾರ ದಂಡ ವಿಧಿಸಿದೆ. ಬಾತ್ರಾ ಅವರು ಪ್ರಸ್ತುತ ಎಫ್‌ಐಎಚ್‌ನ ಅಧ್ಯಕ್ಷರಾಗಿಯೂ ಕೆಲಸ ಮಾಡುತ್ತಿದ್ದಾರೆ.

ಹೋದ ವರ್ಷ ನಡೆದಿದ್ದ ವಿಶ್ವ ಹಾಕಿ ಲೀಗ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯಕ್ಕೂ ಮುನ್ನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ಆಟಗಾರ ಸರ್ದಾರ್‌ ಸಿಂಗ್‌ ಅವರನ್ನು ಯಾರ್ಕ್‌ಷೈರ್‌ ಪೋಲಿಸರು ವಿಚಾರಣೆ ನಡೆಸಿದ್ದರು. ಈ ಸಂಬಂಧ ಹಾಕಿ ಇಂಡಿಯಾಗೆ ಮಾಹಿತಿ ನೀಡಿರಲಿಲ್ಲ. ಇದರಿಂದ ಕೆರಳಿದ್ದ ಬಾತ್ರಾ, ಇಂಗ್ಲೆಂಡ್‌ನ ಕಾನೂನು ಅಧಿಕಾರಿಗಳನ್ನು ಟೀಕಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT