ಕಲಬುರ್ಗಿ: ಕರ್ನಾಟಕದ ಆರ್. ರಿಭವ್ ಹಾಗೂ ಎಲ್. ಹರ್ಷ ಇಲ್ಲಿ ನಡೆಯುತ್ತಿರುವ ‘ಝೆಸ್ಟ್ ಕ್ಲಬ್ ಓಪನ್ 2016 ಎಐಟಿಎ ಪುರುಷರ 50ಕೆ’ ರ್‍ಯಾಂಕಿಂಗ್ ಟೂರ್ನಿಯ ಸೆಮಿಫೈನಲ್ ಹಂತಕ್ಕೆ ಪ್ರವೇಶಿಸಿದ್ದಾರೆ.
ಬುಧವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಆರ್. ರಿಭವ್ 6–4, 6–4ರ ನೇರ ಸೆಟ್‌ಗಳಿಂದ ತಮ್ಮದೇ ರಾಜ್ಯದ ಗೌತಮ್ ರಾಮ್‌ಕುಮಾರ್ ವಿರುದ್ಧ ಗೆದ್ದು ಟೂರ್ನಿಯ ಸೆಮಿಫೈನಲ್ ಹಂತ ಪ್ರವೇಶಿಸಿದ್ದಾರೆ. ಇನ್ನೊಬ್ಬ ಕನ್ನಡಿಗ ಆಟಗಾರ ಎಲ್. ಹರ್ಷ 6–1, 6–3ರಲ್ಲಿ ಮಹಾರಾಷ್ಟ್ರದ ರೋಹನ್ ಭಾಟಿಯಾ ಎದುರು ನೇರ ಸೆಟ್‌ಗಳಿಂದ ಗೆದ್ದು ಸೆಮಿಫೈನಲ್‌ನಲ್ಲಿ ಸ್ಥಾನ ಪಡೆದರು.
ರೋಚಕ ಪಂದ್ಯದಲ್ಲಿ ಆಂಧ್ರಪ್ರದೇಶದ ಶೇಖ್ ಒಸಾಮ 3–6,6–3,6–0ರಲ್ಲಿ ತೆಲಂಗಾಣದ ನಿತಿನ್ ಗುಂಡುಬೋಯ್ನಾ ಎದುರು ಗೆದ್ದು ಸೆಮಿಫೈನಲ್ ಪ್ರವೇಶಿಸಿದರು. ಟೂರ್ನಿಯ ಮೂರನೇ ಶ್ರೇಯಾಂಕಿತ ಆಟಗಾರ ತಮಿಳುನಾಡಿನ ರಸ್ವಂತ್ ರವಿ 6–3,6–2ರಲ್ಲಿ ಆಂಧ್ರಪ್ರದೇಶದ ಫಯಾಜ್ ಹುಸೇನ್ ಎದುರು ಗೆಲುವು ಪಡೆದು ಅಂತಿಮ ನಾಲ್ಕರ ಹಂತಕ್ಕೆ ಕಾಲಿಟ್ಟರು.
ಡಬಲ್ಸ್ ಫಲಿತಾಂಶ: ರಸ್ವಂತ್ ರವಿ ಮತ್ತು ಸಿದ್ಧಾರ್ಥ ಜೋಡಿ 1–6,6–3,10–7ರಲ್ಲಿ ರೋಹಿತ್ ಮತ್ತು ಜಿ. ನಿತಿನ್ ಜೋಡಿಯನ್ನು ಸೋಲಿಸಿ ಫೈನಲ್ ಹಂತ ಪ್ರವೇಶಿಸಿತು. ರೋಹನ್ ಭಾಟಿಯಾ ಮತ್ತು ಶೇಖ್ ಒಸಾಮ ಜೋಡಿ 7–6(2),7–5ರಲ್ಲಿ ಆರ್. ರಿಭವ್ ಮತ್ತು ಗೌತಮ್ ರಾಮ್ ಕುಮಾರ್ ಜೋಡಿಯನ್ನು ಪರಾಭವಗೊಳಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.