ADVERTISEMENT

ನಿಧಾನಗತಿ ಬೌಲಿಂಗ್: ದೋನಿಗೆ ಒಂದು ಪಂದ್ಯ ನಿಷೇಧ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2012, 19:30 IST
Last Updated 19 ಫೆಬ್ರುವರಿ 2012, 19:30 IST

ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ಧ 110 ರನ್‌ಗಳ ಮುಖಭಂಗ ಅನುಭವಿಸಿದ ಭಾರತ ತಂಡ ಆ ಬಳಿಕ ಮತ್ತೊಂದು ಆಘಾತ ಎದುರಿಸಿದೆ. ನಾಯಕ ಮಹೇಂದ್ರ ಸಿಂಗ್ ದೋನಿ ಒಂದು ಪಂದ್ಯದ ನಿಷೇಧಕ್ಕೆ ಒಳಗಾಗಿದ್ದಾರೆ.

ಬ್ರಿಸ್ಬೇನ್‌ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಭಾರತ ನಿಧಾನಗತಿ ಬೌಲಿಂಗ್ ನಡೆಸಿದೆ. ಒಂದು ವರ್ಷದ ಅವಧಿಯಲ್ಲಿ ತಂಡ ಎರಡನೇ ಬಾರಿ ಈ ತಪ್ಪು ಮಾಡಿರುವ ಕಾರಣ ದೋನಿ ನಿಷೇಧಕ್ಕೆ ಗುರಿಯಾಗಿದ್ದಾರೆ. ಮಂಗಳವಾರ ಶ್ರೀಲಂಕಾ ವಿರು ದ್ಧದ ಪಂದ್ಯದಲ್ಲಿ ಆಡುವಂತಿಲ್ಲ.

ಕಳೆದ ಏಪ್ರಿಲ್ 2 ರಂದು ವಾಂಖೇಡೆ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ನಿಧಾನಗತಿ ಬೌಲಿಂಗ್ ನಡೆಸಿತ್ತು.

ADVERTISEMENT

ಐಸಿಸಿ ಮ್ಯಾಚ್ ರೆಫರಿ ಆ್ಯಂಡಿ ಪೈಕ್ರಾಫ್ಟ್ ಅವರು ದೋನಿಗೆ ಪಂದ್ಯ ಶ್ಕುದ ಶೇ. 40 ರಷ್ಟು ಹಾಗೂ ತಂಡದ ಇತರ ಸದಸ್ಯ ರಿಗೆ ಶೇ. 20 ರಷ್ಟು ದಂಡವನ್ನೂ ವಿಧಿಸಿದ್ದಾರೆ. ಈ ಶಿಕ್ಷೆಯನ್ನು ದೋನಿ ಹಾಗೂ ಭಾರತ ತಂಡ ಒಪ್ಪಿಕೊಂಡಿದೆ. ಇದರಿಂದ ಯಾವುದೇ ವಿಚಾರಣೆಯ ಅಗತ್ಯವಿಲ್ಲ.

ಪ್ರಸಕ್ತ ಆಸೀಸ್ ಪ್ರವಾಸದಲ್ಲಿ ದೋನಿ ನಿಷೇಧ ಶಿಕ್ಷೆಗೆ ಗುರಿಯಾದದ್ದು ಇದು ಎರಡನೇ ಸಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.