ADVERTISEMENT

ನಿವೃತ್ತಿ ಪ್ರಕಟಿಸಿದ ಜಾನ್ ಡೇವಿಸನ್

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2011, 19:30 IST
Last Updated 15 ಮಾರ್ಚ್ 2011, 19:30 IST

ಬೆಂಗಳೂರು: ಕೆನಡಾ ತಂಡದ ಹಿರಿಯ ಆಟಗಾರ ಜಾನ್ ಡೇವಿಸನ್ ಬುಧವಾರ ತಮ್ಮ ವೃತ್ತಿಜೀವನದ ಕೊನೆಯ ಪಂದ್ಯ ಆಡಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದ ಬಳಿಕ ನಿವೃತ್ತಿ ಹೊಂದುವುದಾಗಿ ಅವರು ಪ್ರಕಟಿಸಿದರು.

2003 ವಿಶ್ವಕಪ್ ಟೂರ್ನಿಯಲ್ಲಿ ಅವರು ವೆಸ್ಟ್ ಇಂಡೀಸ್ ವಿರುದ್ಧ 67 ಎಸೆತಗಳಲ್ಲಿ ಶತಕ ಗಳಿಸಿ ಸುದ್ದಿಯಾಗಿದ್ದರು. 41ರ ಹರೆಯದ ಡೇವಿಸನ್ ಕೆನಡಾದಲ್ಲಿ ಹುಟ್ಟಿದರೂ, ತಮ್ಮ ಜೀವನದ ಹೆಚ್ಚಿನ ಅವಧಿಯನ್ನು ಆಸ್ಟ್ರೇಲಿಯಾದಲ್ಲಿ ಕಳೆದಿದ್ದಾರೆ. ಆಸೀಸ್ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವುದು ಅವರ ಕನಸಾಗಿತ್ತು.

‘ಜೀವನದ ಹೆಚ್ಚಿನ ಸಮಯವನ್ನು ಆಸ್ಟ್ರೇಲಿಯಾದಲ್ಲಿ ಕಳೆದಿದ್ದೇನೆ. ಆ ತಂಡಕ್ಕಾಗಿ ಆಡುವುದು ನನ್ನ ಹಂಬಲವಾಗಿತ್ತು. ಆದರೆ ಅದು ಈಡೇರಿಲ್ಲ. ಇದೀಗ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದೊಂದಿಗೆ ಕ್ರಿಕೆಟ್‌ಗೆ ಗುಡ್‌ಬೈ ಹೇಳಲಿದ್ದೇನೆ. ಇದು ಅದ್ಭುತ ಅನುಭವ’ ಎಂದು ಮಂಗಳವಾರ ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.