ADVERTISEMENT

ನೆಟ್ಟಕಲ್ಲಪ್ಪ ರಸ್ತೆ ಓಟ ಇಂದು 120 ಅಥ್ಲೀಟ್‌ಗಳ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 4 ಜೂನ್ 2011, 19:30 IST
Last Updated 4 ಜೂನ್ 2011, 19:30 IST

ಹಾಸನ: ಡೆಕ್ಕನ್ ಅಥ್ಲೆಟಿಕ್  ಕ್ಲಬ್ ಹಾಗೂ `ಪ್ರಜಾವಾಣಿ~ `ಡೆಕ್ಕನ್ ಹೆರಾಲ್ಡ್~ ಪತ್ರಿಕೆಗಳ ಪ್ರಾಯೋಜಕತ್ವದಲ್ಲಿ ಇದೇ ಮೊದಲ ಬಾರಿಗೆ ಹಾಸನದಲ್ಲಿ ಆಯೋಜಿಸಿರುವ ನೆಟ್ಟಕಲ್ಲಪ್ಪ ರಸ್ತೆ ಓಟದಲ್ಲಿ ಪಾಲ್ಗೊಳ್ಳಲು ರಾಜ್ಯದ ವಿವಿಧ ಭಾಗಗಳಿಂದ 120ಕ್ಕೂ ಹೆಚ್ಚು ಅಥ್ಲೀಟ್‌ಗಳು ಆಗಮಿಸಿದ್ದಾರೆ.

ಕಳೆದ ವರ್ಷ ವಿಜಾಪುರದಲ್ಲಿ ಸ್ಪರ್ಧೆ ನಡೆದಿತ್ತು. ಚಿಕ್ಕಮಗಳೂರು, ಮೈಸೂರು, ದಕ್ಷಿಣ ಕನ್ನಡ ಜಿಲ್ಲೆಗ ಳಿಂದ ಬಂದಿರುವ ಅಥ್ಲೀಟ್‌ಗಳು ಹಾಸನದಲ್ಲಿ ಹನಿಯುತ್ತಿರುವ ಮಳೆಯಲ್ಲೂ ಸಂಜೆ ಅಭ್ಯಾಸ ನಡೆಸಿದರು.

ಪುರುಷರು, ಮಹಿಳೆಯರು, ಬಾಲಕಿಯರು ಹಾಗೂ ಬಾಲಕರ ವಿಭಾಗಗಳಲ್ಲಿ ಸ್ಫರ್ಧೆ ನಡೆಯಲಿವೆ.
ಪುರುಷರಿಗಾಗಿ 12 ಕಿ.ಮೀ. ಓಟ ನಡೆಯಲಿದ್ದು, ಬೆಳಿಗ್ಗೆ 6.30ಕ್ಕೆ ಜಿಲ್ಲಾ ಕ್ರೀಡಾಂಗಣದಿಂದ ಆರಂಭವಾಗಲಿದೆ. ಇಲ್ಲಿಂದ ಎಂ.ಜಿ ರಸ್ತೆ, ರಿಂಗ್ ರಸ್ತೆ, ಸಾಲಗಾಮೆ ರಸ್ತೆ ಮಾರ್ಗವಾಗಿ ಡೈಟ್ ಕೇಂದ್ರದವರೆಗೆ ಹೋಗಿ ಅಲ್ಲಿಂದ ಮರಳಿ ಅದೇ ಮಾರ್ಗದಲ್ಲಿ ಜಿಲ್ಲಾ ಕ್ರೀಡಾಂಗಣಕ್ಕೆ ಬರುವರು.

ಮಹಿಳೆಯರಿಗೆ ನಡೆಯುವ 6 ಕಿ.ಮೀ ಓಟ ಸಾಲಗಾಮೆ ರಸ್ತೆಯ ಡೈಟ್ ಕೇಂದ್ರದ ಮುಂದಿನಿಂದ ಆರಂಭವಾಗಿ ಸಾಲಗಾಮೆ ರಸ್ತೆ, ರಿಂಗ್ ರಸ್ತೆ, ಎಂಜಿ. ರಸ್ತೆ ಮೂಲಕ ಬಂದು ಜಿಲ್ಲಾ ಕ್ರೀಡಾಂಗಣದಲ್ಲಿ ಕೊನೆಗೊಳ್ಳುವುದು.

ಬಾಲಕ ಹಾಗೂ ಬಾಲಕಿಯರಿಗೆ 2.5 ಕಿ.ಮೀ. ಓಟ ನಡೆಯಲಿದ್ದು ಎಂಸಿಎಫ್ ಕ್ವಾರ್ಟರ್ಸ್‌ ಸಮೀಪದಿಂದ ಸಾಲಗಾಮೆರಸ್ತೆ, ರಿಂಗ್ ರಸ್ತೆ, ಎಂ.ಜಿ ರಸ್ತೆ ಮೂಲಕ ಬಂದು ಕ್ರೀಡಾಂಗಣದಲ್ಲಿ ಕೊನೆಗೊಳ್ಳುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.