ADVERTISEMENT

ನೇಮರ್ ಚೇತರಿಕೆ: ರೋಡ್ರಿಗೊ

ಏಜೆನ್ಸೀಸ್
Published 21 ಮಾರ್ಚ್ 2018, 19:30 IST
Last Updated 21 ಮಾರ್ಚ್ 2018, 19:30 IST
ಶಸ್ತ್ರಚಿಕಿತ್ಸೆ ಬಳಿಕ ಮೊದಲ ಬಾರಿಗೆ ನೇಮರ್‌ ತಮ್ಮ ಸಹೋದರಿ ಜನ್ಮದಿನದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು
ಶಸ್ತ್ರಚಿಕಿತ್ಸೆ ಬಳಿಕ ಮೊದಲ ಬಾರಿಗೆ ನೇಮರ್‌ ತಮ್ಮ ಸಹೋದರಿ ಜನ್ಮದಿನದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು   

ಪ್ಯಾರಿಸ್‌ (ಎಎಫ್‌ಪಿ): ಇತ್ತೀಚೆಗಷ್ಟೇ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಬ್ರೆಜಿಲ್‌ ಫುಟ್‌ಬಾಲ್ ಆಟಗಾರ ನೇಮರ್ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಂಡದ
ವೈದ್ಯರಾದ ರೋಡ್ರಿಗೊ ಲಾಸ್ಮರ್ ಹೇಳಿದ್ದಾರೆ.

‘ಮಾರ್ಚ್‌ 3ರಂದು ನೇಮರ್ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಕೆಲವು ವಾರಗಳಲ್ಲಿ ಅವರು ಗುಣಮುಖರಾಗಲಿದ್ದಾರೆ. ರಷ್ಯಾದಲ್ಲಿ ನಡೆಯುವ ವಿಶ್ವಕಪ್‌ ವೇಳೆಗೆ ಫಿಟ್ ಆಗಲಿದ್ದಾರೆ’ ಎಂದು ರೋಡ್ರಿಗೊ ಮಾಹಿತಿ ನೀಡಿದ್ದಾರೆ.

‘ಏಪ್ರಿಲ್ ತಿಂಗಳಿನಲ್ಲಿ ಗಾಯ ವಾಸಿಯಾಗುವ ನಿರೀಕ್ಷೆ ಇದೆ. ಆ ಬಳಿಕ ಅಭ್ಯಾಸ ಆರಂಭಿಸಬಹುದು’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.