ADVERTISEMENT

ನೋವಲ್ಲೂ ಪದಕ ಗೆದ್ದ ಶಿವ

ಪಿಟಿಐ
Published 6 ಮೇ 2017, 19:30 IST
Last Updated 6 ಮೇ 2017, 19:30 IST
ಶಿವ ಥಾಪಾ
ಶಿವ ಥಾಪಾ   

ತಾಷ್ಕೆಂಟ್‌: ತಲೆಗೆ ತೀವ್ರ ಗಾಯವಾಗಿದ್ದು, ರಕ್ತ ಒಸರುತ್ತಿದ್ದುದರಿಂದ ಅಖಾಡ ತೊರೆದ ಶಿವ ಥಾಪಾ ಅವರು ನಿರಾಸೆಯ ನಡುವೆಯೇ ಭಾರತಕ್ಕೆ ಬೆಳ್ಳಿಯ ಪದಕ ಗೆದ್ದುಕೊಟ್ಟರು.

ಇಲ್ಲಿ ನಡೆದ ಏಷ್ಯಾ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನ 60 ಕೆಜಿ ವಿಭಾಗದಲ್ಲಿ ಗಮನಾರ್ಹ ಸಾಧನೆ ತೋರಿ ದ್ದರಿಂದ ಅವರು ವಿಶ್ವ ಚಾಂಪಿ ಯನ್‌ಷಿಪ್‌ಗೂ ಅರ್ಹತೆ ಗಳಿಸಿದರು.

ಆದರೆ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡಲು ಸಾಧ್ಯವಾಗದ ಗೌರವ್ ಬಿಧೂರಿ ಮತ್ತು ಮನೀಶ್‌ ಪನ್ವಾರ್‌ ನಿರಾಸೆ ಅನುಭವಿಸಿದರು.

ಎರಡನೇ ಶ್ರೇಯಾಂಕಿತ ಮತ್ತು ಸ್ಥಳೀಯ ಬಾಕ್ಸರ್‌ ಎಲ್ನುರ್ ಅಬ್ದುರೈಮೋವ್‌  ವಿರುದ್ಧ ಶಿವ ಥಾಪಾ ಫೈನಲ್‌ನಲ್ಲಿ ಕಣಕ್ಕಿಳಿದಿದ್ದರು. ನಾಲ್ಕನೇ ಶ್ರೇಯಾಂಕಿತ ಥಾಪಾ ಪ್ರಬಲ ಪ್ರತಿಸ್ಪರ್ಧೆಯನ್ನೂ ಒಡ್ಡಿದ್ದರು. ಆದರೆ ಮೊದಲ ಸುತ್ತಿನ ಆರಂಭದಲ್ಲೇ ಅವರ ತಲೆಗೆ ಎದುರಾಳಿ ಡಿಚ್ಚಿ ಹೊಡೆದರು. ಇದರಿಂದ ಹಣೆಯ ಮೇಲೆ ಗಂಭೀರ ಗಾಯವಾಗಿ ರಕ್ತ ಒಸರಿತು. ರೆಫರಿ ತಕ್ಷಣ ಪಂದ್ಯವನ್ನು ಸ್ಥಗಿತಗೊಳಿಸಿದರು.

ಹೀಗಾಗಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟು ಕೊಂಡ ಅವರು ಏಷ್ಯಾ ಚಾಂಪಿಯನ್‌ ಷಿಪ್‌ನಲ್ಲಿ ಸತತ ಮೂರು ಬಾರಿ ಪದಕ ಗೆದ್ದ ಮೊದಲ ಭಾರತೀಯ  ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡರು.

ADVERTISEMENT


ಲೈಟ್‌ವೇಟ್‌ ವಿಭಾಗದಲ್ಲಿ ಸ್ಪರ್ಧಿಸಲು ಆರಂಭಿಸಿದ ನಂತರ ಥಾಪಾ ಗಳಿಸಿದ ಮೊದಲ ಪದಕ ಇದು. ಅವರು ಹಿಂದೆ 56 ಕೆ.ಜಿ. ವಿಭಾಗದಲ್ಲಿ ಸ್ವರ್ಧಿಸು ತ್ತಿದ್ದಾಗ 2013ರಲ್ಲಿ ಚಿನ್ನ ಮತ್ತು 2015ರಲ್ಲಿ ಕಂಚಿನ ಪದಕ ಗೆದ್ದಿದ್ದರು.

‘ಲೈಟ್‌ ವೇಟ್‌ ವಿಭಾಗದಲ್ಲಿ ಇದು ನನ್ನ ಮೊದಲ ಅಂತರರಾಷ್ಟ್ರೀಯ ಪದಕ. ವಿಶ್ವ ಚಾಂಪಿಯನ್‌ಷಿಪ್‌ಗೆ ಪ್ರವೇಶ ಪಡೆಯಲು ಸಾಧ್ಯವಾದದ್ದು ಈ ಪದಕದ ಸವಿಯನ್ನು ಹೆಚ್ಚಿಸಿದೆ’ ಎಂದು ಸ್ಪರ್ಧೆಯ ನಂತರ  ಅಸ್ಸೋಮ್‌ನ ಬಾಕ್ಸರ್ ಹೇಳಿದರು. ವಿಶ್ವ ಚಾಂಪಿ ಯನ್‌ಷಿಪ್‌ನ 56 ಕೆಜಿ ವಿಭಾಗದಲ್ಲಿ ಕಂಚು ಗೆದ್ದಿದ್ದ ಥಾಪಾ ಕಳೆದ ವರ್ಷ ಡಿಸೆಂಬರ್‌ನಿಂದ  ಲೈಟ್ ವೇಟ್ ವಿಭಾಗದಲ್ಲಿ ಸ್ಪರ್ಧಿಸು ತ್ತಿದ್ದಾರೆ. ಇದೇ ವರ್ಷದ ಆರಂಭದಲ್ಲಿ ಬಲ್ಗೇರಿಯಾ ಮತ್ತು ಥಾಯ್ಲೆಂಡ್‌ನಲ್ಲಿ ನಡೆದ ಟೂರ್ನಿಗಳಲ್ಲಿ ಸೋಲುಂಡಿ  ದ್ದರು. ಆದರೆ ರಾಷ್ಟ್ರೀ   ಯ ಚಾಂಪಿ ಯನ್‌ ಷಿಪ್‌ನಲ್ಲಿ ಚಿನ್ನ ಗೆದ್ದಿದ್ದರು. 

‘ಲೈಟ್‌ವೇಟ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆ ಇತ್ತು. ಆರಂಭದಲ್ಲಿ ಇದಕ್ಕೆ ಧಕ್ಕೆ ಬಂದರೂ ನಂತರ ಸುಧಾರಿಸಿಕೊಂಡೆ. ಈಗ ಪ್ರಮುಖ ಟೂರ್ನಿಯಲ್ಲಿ ನನ್ನ ಸಾಮರ್ಥ್ಯ ಪ್ರದರ್ಶಿಸಲು ಸಾಧ್ಯವಾಗಿದೆ. ಆದ್ದರಿಂದ ಖುಷಿಯಾಗಿದೆ’ ಎಂದು ಅವರು ಹೇಳಿದರು.

23 ವರ್ಷ ವಯಸ್ಸಿನ ಶಿವ ಥಾಪಾ ಶುಕ್ರವಾರ ನಡೆದ ಸೆಮಿಫೈನಲ್‌ನಲ್ಲಿ ಅಗ್ರ ಶ್ರೇಯಾಂಕಿತ, ಮಂಗೋಲಿಯಾದ ದೋರ್ಜನ್ಯಾಂಬು ಒಟ್ಗೊಂಡೊಲಾಯ್‌ ಅವರನ್ನು ಮಣಿಸಿದ್ದರು. ಆ ಪಂದ್ಯದಲ್ಲಿ ಅವರ ಕಣ್ಣಿನ ಅಂಚಿಗೆ ಗಾಯವಾಗಿತ್ತು.

ಗೌರವ್‌, ಮನೀಶ್‌ಗೆ ನಿರಾಸೆ ಗೌರವ್‌ ಮತ್ತು ಮನೀಶ್‌ ಈ ಕೂಟದಲ್ಲಿ ನಿರಾಸೆ ಕಂಡರು. ಜಪಾನ್‌ನ ರೋಮಿ ತನಾಕ ವಿರುದ್ಧ ಗೌರವ್‌ ಸೋತರೆ, ಪಾಕಿಸ್ತಾನದ ಅವೈಸ್ ಅಲಿಖಾನ್‌ಗೆ ಮನೀಶ್‌ ಮಣಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.