ADVERTISEMENT

ನ್ಯೂಜಿಲೆಂಡ್‌ಗೆ ಜಯ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2013, 19:30 IST
Last Updated 13 ಡಿಸೆಂಬರ್ 2013, 19:30 IST
ನ್ಯೂಜಿಲೆಂಡ್‌ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ ವೇಗಿ ಟ್ರೆಂಟ್‌ ಬೌಲ್ಟ್‌ ಅವರ ಬೌಲಿಂಗ್‌ ವೈಖರಿ 	–ಎಎಫ್‌ಪಿ ಚಿತ್ರ
ನ್ಯೂಜಿಲೆಂಡ್‌ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ ವೇಗಿ ಟ್ರೆಂಟ್‌ ಬೌಲ್ಟ್‌ ಅವರ ಬೌಲಿಂಗ್‌ ವೈಖರಿ –ಎಎಫ್‌ಪಿ ಚಿತ್ರ   

ವೆಲಿಂಗ್ಟನ್ (ಎಎಫ್‌ಪಿ): ಟ್ರೆಂಟ್ ಬೌಲ್ಟ್ (80ಕ್ಕೆ 10 ) ಮತ್ತು ಟಿಮ್‌ ಸೌಥಿ (82ಕ್ಕೆ 5) ಅವರ ಮಾರಕ ಬೌಲಿಂಗ್ ನೆರವಿನಿಂದ ನ್ಯೂಜಿಲೆಂಡ್‌ ತಂಡ ವೆಸ್ಟ್‌ಇಂಡೀಸ್ ವಿರುದ್ಧದ ಟೆಸ್ಟ್‌ ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 73 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

ಇದರೊಂದಿಗೆ ಕಿವೀಸ್‌ ಬಳಗ ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಕಾಯ್ದು ಕೊಂಡಿದೆ.
ಬೇಸಿನ್ ರಿಸರ್ವ್ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ಮೊದಲ ಇನಿಂಗ್ಸ್‌ನಲ್ಲಿ ಗಳಿಸಿದ್ದ 441 ರನ್‌ಗಳಿಗೆ ಉತ್ತರವಾಗಿ  ವಿಂಡೀಸ್ ತನ್ನ ಪ್ರಥಮ ಇನಿಂಗ್ಸ್‌ನಲ್ಲಿ ಮೂರನೇ ದಿನದಾಟದಲ್ಲಿ 49.5 ಓವರ್‌ಗಳಲ್ಲಿ 193 ರನ್‌ಗಳಿಗೆ ಆಲೌಟಾಗಿ ಫಾಲೋಆನ್‌ ಪಡೆಯಿತು.
ಎರಡನೇ ಇನಿಂಗ್ಸ್‌ನಲ್ಲೂ ಕೆರಿಬಿಯನ್‌ ಬಳಗದ್ದು ಅದೇ ರಾಗ, ಅದೇ ಹಾಡು.

ಆತಿಥೇಯ ತಂಡದ ವೇಗಿಗಳ ಪ್ರಭಾವಿ ಬೌಲಿಂಗ್ ದಾಳಿಗೆ ಸಿಲುಕಿದ ಪ್ರವಾಸಿ ತಂಡ 54.5 ಓವರ್‌ಗಳಲ್ಲಿ 175 ರನ್‌ಗಳಿಗೆ ಸರ್ವಪತನಗೊಂಡಿತು.

ನ್ಯೂಜಿಲೆಂಡ್‌ ಪರ ಟ್ರೆಂಟ್ ಬೌಲ್ಟ್ ಒಟ್ಟು 10  ವಿಕೆಟ್ ಪಡೆದು ಮಿಂಚಿ ದರು. ಇದರೊಂದಿಗೆ ನ್ಯೂಜಿಲೆಂಡ್ ತಂಡ ಈ ವರ್ಷದಲ್ಲಿ ತಾನಾಡಿದ 11 ಟೆಸ್ಟ್‌ ಪಂದ್ಯಗಳಲ್ಲಿ ಮೊದಲ ಜಯ ಪಡೆಯಿತು. 

ಸಂಕ್ಷಿಪ್ತ ಸ್ಕೋರ್: ನ್ಯೂಜಿಲೆಂಡ್: ಮೊದಲ ಇನಿಂಗ್ಸ್ 115.1 ಓವರ್‌ಗಳಲ್ಲಿ 441; ವೆಸ್ಟ್‌ ಇಂಡೀಸ್: ಮೊದಲ ಇನಿಂಗ್ಸ್ 49.5 ಓವರ್‌ಗಳಲ್ಲಿ 193 (ಮಾರ್ಲೊನ್ ಸ್ಯಾಮುಯೆಲ್ಸ್ 60, ಕರ್ಕ್‌ ಎಡ್ವರ್ಡ್ಸ್ 55;  ಟ್ರೆಂಟ್ ಬೌಲ್ಟ್ 40 ಕ್ಕೆ 6, ಟಿಮ್ ಸೌಥಿ 58 ಕ್ಕೆ 2, ಕೋರಿ ಜೆ.ಆ್ಯಂಡರ್ಸನ್ 20 ಕ್ಕೆ 2) ಹಾಗೂ 54.5 ಓವರ್‌ಗಳಲ್ಲಿ 175 (ಕರ್ಕ್ ಎಡ್ವರ್ಡ್ಸ್‌ 35, ಕೀರನ್ ಪೊವೆಲ್ 36; ಟ್ರೆಂಟ್ ಬೌಲ್ಟ್ 40ಕ್ಕೆ 4, ಟಿಮ್ ಸೌಥಿ 24ಕ್ಕೆ 3, ವಾಗ್ನರ್ 67ಕ್ಕೆ 2):

ಫಲಿತಾಂಶ: ನ್ಯೂಜಿಲೆಂಡ್‌ಗೆ ಇನಿಂಗ್ಸ್ ಹಾಗೂ 73 ರನ್‌ಗಳ ಜಯ. ಮೂರು ಪಂದ್ಯಗಳ ಸರಣಿಯಲ್ಲಿ 1–0 ರಲ್ಲಿ ಮುನ್ನಡೆ.       ಪಂದ್ಯ ಶ್ರೇಷ್ಠ: ಟ್ರೆಂಟ್ ಬೌಲ್ಟ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.