ADVERTISEMENT

ಪರಿಚಿತ ಪಿಚ್‌ ಉಪಕಾರಿಯಾಯಿತು: ಜೋಸ್‌ ಬಟ್ಲರ್‌

ಪಿಟಿಐ
Published 14 ಮೇ 2018, 20:18 IST
Last Updated 14 ಮೇ 2018, 20:18 IST

ಮುಂಬೈ : ‘ವಾಂಖೆಡೆ ಕ್ರೀಡಾಂಗಣದ ಪಿಚ್‌ ಬಗ್ಗೆ ಚೆನ್ನಾಗಿ ತಿಳಿದಿರುವುದರಿಂದ ಮುಂಬೈ ಇಂಡಿಯನ್ಸ್ ಎದುರಿನ ಪಂದ್ಯದಲ್ಲಿ ಸುಲಭವಾಗಿ ರನ್‌ ಗಳಿಸಲು ಸಾಧ್ಯ ವಾಯಿತು’ ಎಂದು ರಾಜಸ್ಥಾನ್ ರಾಯಲ್ಸ್ ತಂಡದ ಜೋಸ್ ಬಟ್ಲರ್ ತಿಳಿಸಿದರು.

ಭಾನುವಾರ ರಾತ್ರಿ ನಡೆದ ಪಂದ್ಯದ ನಂತರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು ‘ಮುಂಬೈ ನನ್ನ ಇಷ್ಟದ ಸ್ಥಳ. ಇಲ್ಲಿ ನಾನು ಸಮಯ ವ್ಯಯಿಸಿದ್ದೇನೆ. ಹೀಗಾಗಿ ಈ ಕ್ರೀಡಾಂಗಣದ ಪಿಚ್‌ ನನಗೆ ಚಿರ ಪರಿಚಿತ. ಇಲ್ಲಿ ಉತ್ತಮ ಆಟ ಆಡಲು ಸಾಧ್ಯವಾದದ್ದು ಖುಷಿ ನೀಡಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT