ADVERTISEMENT

ಪಾಕ್‌ನಲ್ಲಿ ಕ್ರಿಕೆಟ್‌ ಆಡಲು ನ್ಯೂಜಿಲೆಂಡ್ ಒಲವು

ಏಜೆನ್ಸೀಸ್
Published 3 ಮೇ 2018, 18:58 IST
Last Updated 3 ಮೇ 2018, 18:58 IST

ವೆಲಿಂಗ್ಟನ್‌ (ಎಎಫ್‌ಪಿ): ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಪಾಕಿಸ್ತಾನ ಪ್ರವಾಸದ ಕುರಿತು ಚಿಂತನೆ ನಡೆಯುತ್ತಿದೆ ಎಂದು ‘ನ್ಯೂಜಿಲೆಂಡ್ ಕ್ರಿಕೆಟ್’ ತಿಳಿಸಿದೆ. ಇದು ಸಾಧ್ಯವಾದರೆ 2003ರ ನಂತರ ಈ ತಂಡ ಮೊದಲ ಬಾರಿ ಪಾಕ್‌ ಪ್ರವಾಸ ಕೈಗೊಂಡಂತೆ ಆಗಲಿದೆ.

ಇದೇ ಸಂದರ್ಭದಲ್ಲಿ ವಿವಾದಿತ ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡುವುದಿಲ್ಲ ಎಂದು ಆಸ್ಟ್ರೇಲಿಯಾ ಸ್ಪಷ್ಟವಾಗಿ ಹೇಳಿದೆ.

‘ಪಾಕಿಸ್ತಾನದ ಮನವಿಗೆ ಸ್ಪಂದಿಸಿರುವ ನ್ಯೂಜಿಲೆಂಡ್‌ ಭದ್ರತೆ ಮತ್ತಿತರ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಿದೆ. ಸರ್ಕಾರ ಮತ್ತು ಆಟಗಾರರ ಜೊತೆ ಮಾತುಕತೆ ನಡೆಸುತ್ತಿದೆ’ ಎಂದು ನ್ಯೂಜಿಲೆಂಡ್ ಕ್ರಿಕೆಟ್‌ನ ವಕ್ತಾರ ಸ್ಥಳೀಯ ರೇಡಿಯೊ ಕೇಂದ್ರಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ADVERTISEMENT

ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಯುಎಇಯಲ್ಲಿ ಸರಣಿಗಳನ್ನು ಆಡಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ ತಂಡಗಳನ್ನು ಆಹ್ವಾನಿಸಿತ್ತು.

ಈ ಪಂದ್ಯಗಳನ್ನು ಪಾಕಿಸ್ತಾನದಲ್ಲಿ ಆಡಲು ಒಪ್ಪಿಕೊಳ್ಳುವಂತೆ ಉಭಯ ತಂಡಗಳನ್ನೂ ಕೋರಿತ್ತು.

2009ರಲ್ಲಿ ಟೆಸ್ಟ್ ಆಡಲು ತೆರಳಿದ್ದ ಶ್ರೀಲಂಕಾ ಕ್ರಿಕೆಟ್‌ ತಂಡದ ಮೇಲೆ ಲಾಹೋರ್‌ನಲ್ಲಿ ಉಗ್ರರು ದಾಳಿ ನಡೆಸಿದ್ದರು. ನಂತರ ಪಾಕಿಸ್ತಾನದಲ್ಲಿ ಮಹತ್ವದ ಪಂದ್ಯಗಳು ನಡೆಯಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.