ADVERTISEMENT

ಪಾಕ್‌ಗೆ ರೋಚಕ ಜಯ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2014, 19:30 IST
Last Updated 17 ಮಾರ್ಚ್ 2014, 19:30 IST

ಮೀರ್‌ಪುರ (ಢಾಕಾ), (ಐಎಎನ್‌ಎಸ್‌): ಕಮ್ರನ್‌ ಅಕ್ಮಲ್‌ ಮತ್ತು ಮೊಹಮ್ಮದ್‌ ಹಫೀಜ್‌ ಅವರ ಆಕ್ರಮಣಕಾರಿ ಬ್ಯಾಟಿಂಗ್ ನೆರವಿನಿಂದ ಪಾಕಿಸ್ತಾನ ತಂಡ ನ್ಯೂಜಿಲೆಂಡ್‌ ವಿರುದ್ಧದ ಟ್ವೆಂಟಿ–20 ಕ್ರಿಕೆಟ್‌ ಅಭ್ಯಾಸ ಪಂದ್ಯದಲ್ಲಿ ಆರು ವಿಕೆಟ್‌ಗಳ ರೋಚಕ ಗೆಲುವು ಪಡೆಯಿತು.

ಷೇರ್‌ ಎ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಕಿವೀಸ್‌ ಬಳಗ ಮೊದಲು ಬ್ಯಾಟ್‌ ಮಾಡಿ ನಿಗದಿತ ಓವರ್‌ಗಳಲ್ಲಿ 145 ರನ್‌ ಕಲೆ ಹಾಕಿತು.  ಹಫೀಜ್‌ ಸಾರಥ್ಯದ ಪಾಕ್ ತಂಡ ಒಂದು ಎಸೆತ ಬಾಕಿ ಇರುವಂತೆಯೇ ಗುರಿ ಮುಟ್ಟಿತು.

ಆರಂಭದಲ್ಲಿ ಆರ್ಭಟಿಸಿದ ಬ್ರೆಂಡನ್‌ ಮೆಕ್ಲಮ್‌ (ಔಟಾಗದೆ 59, 45ಎಸೆತ, 3 ಬೌಂಡರಿ, 4 ಸಿಕ್ಸರ್‌) ಕಿವೀಸ್‌ ಬಳಗ ಸವಾಲಿನ ಮೊತ್ತ ಕಲೆ ಹಾಕಲು ನೆರವಾದರು.

ಅಕ್ಮಲ್‌ (52, 45ಎ., 6ಬೌಂ., 2 ಸಿ.,) ಮತ್ತು ಹಫೀಜ್‌ (55, 39ಎ., 3ಬೌಂ., 5 ಸಿ.,) ಎರಡನೇ ವಿಕೆಟ್‌ಗೆ 83 ರನ್‌ ಕಲೆ ಹಾಕಿ ಪಾಕ್ ತಂಡದ ಗೆಲುವಿಗೆ ಮುನ್ನುಡಿ ಬರೆದರು. ಈ ತಂಡ ಜಯ ಪಡೆಯಲು ಕೊನೆಯ ಓವರ್‌ನಲ್ಲಿ 7 ರನ್ ಗಳಿಸಬೇಕಿತ್ತು. ಬುಧವಾರ ನಡೆಯಲಿರುವ ಎರಡನೇ ಅಭ್ಯಾಸ ಪಂದ್ಯದಲ್ಲಿ ಪಾಕ್ ತಂಡ ದಕ್ಷಿಣ ಆಫ್ರಿಕಾ ಎದುರು ಪೈಪೋಟಿ ನಡೆಸಲಿದೆ.

ಸಂಕ್ಷಿಪ್ತ ಸ್ಕೋರು: ನ್ಯೂಜಿಲೆಂಡ್‌ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 145 (ಮಾರ್ಟಿಲ್‌ ಗುಪ್ಟಿಲ್‌ 11, ಬ್ರೆಂಡನ್‌ ಮೆಕ್ಲಮ್‌ ಔಟಾಗದೆ 59, ಕಾಲಿನ್‌ ಮನ್ರೊ 20; ಮೊಹಮ್ಮದ್‌ ತಲ್ಹಾ 22ಕ್ಕೆ2, ಜುಲ್ಫಿಕರ್‌ ಬಾಬರ್ 26ಕ್ಕೆ1, ಉಮರ್‌ ಗುಲ್‌ 16ಕ್ಕೆ3, ಬಿಲಾವಲ ಭಟ್ಟಿ 15ಕ್ಕೆ1)
ಪಾಕಿಸ್ತಾನ 19.5 ಓವರ್‌ಗಳಲ್ಲಿ 4 ವಿಕೆಟ್‌ಗೆ 149. (ಕಮ್ರನ್‌ ಅಕ್ಮಲ್‌ 52, ಶಾರ್ಜೀಲ್‌ ಖಾನ್‌ 12, ಮೊಹಮ್ಮದ್‌ ಹಫೀಜ್‌ 55; ನಥಾನ್‌ ಮೆಕ್ಲಮ್‌ 21ಕ್ಕೆ2). ಫಲಿತಾಂಶ: ಪಾಕಿಸ್ತಾನಕ್ಕೆ 6 ವಿಕೆಟ್‌ ಜಯ.

ಹಾಲೆಂಡ್‌ ತಂಡಕ್ಕೆ ಜಯ
ಸಿಲ್ಹೆಟ್‌: ಯುನೈಟೆಡ್‌ ಅರಬ್‌ ಎಮಿರೇಟ್ಸ್‌್ ನೀಡಿದ್ದ ಸವಾಲಿನ ಗುರಿಯನ್ನು ಸುಲಭವಾಗಿ ಮುಟ್ಟಿದ ಹಾಲೆಂಡ್‌ ತಂಡ ಐಸಿಸಿ ಟ್ವೆಂಟಿ–20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಅರ್ಹತಾ ಪಂದ್ಯದಲ್ಲಿ ಆರು ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.

ಸಂಕ್ಷಿಪ್ತ ಸ್ಕೋರು: ಯನೈಟೆಡ್‌ ಅರಬ್‌ ಎಮಿರೇಟ್ಸ್‌ 19.5 ಓವರ್‌ಗಳಲ್ಲಿ 151 (ಖುರ್ರಮ್‌ ಖಾನ್‌ 31, ಸ್ವಪ್ನಿಲ್‌ ಪಾಟೀಲ್‌ 23, ಶೈಮನ್‌ ಅನ್ವರ್‌ 32, ರೋಹನ್‌ ಮುಸ್ತಫಾ 20; ಆಶನ್‌ ಮಲೀಕ್‌ 16ಕ್ಕೆ3, ಟಾಮ್‌ ಕೂಪರ್‌ 18ಕ್ಕೆ2); ಹಾಲೆಂಡ್‌ 18.5 ಓವರ್‌ಗಳಲ್ಲಿ 4 ವಿಕೆಟ್‌ಗೆ 152 (ಸ್ಟೀಫನ್‌ ಮೈಬರ್ಗ್‌ 55, ಮಿಷೆಲ್‌ ಸ್ವಾರ್ಟ್‌್ 26, ಟಾಮ್‌ ಕೂಪರ್‌ ಔಟಾಗದೆ 34; ಕಮ್ರಾನ್‌ ಶಾಹ್ಜದ್‌ 19ಕ್ಕೆ2).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.