ADVERTISEMENT

ಪಾರ್ನೆಲ್‌ಗೆ ಜಾಮೀನು

ರೇವ್ ಪಾರ್ಟಿ ಪ್ರಕರಣ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2013, 19:59 IST
Last Updated 8 ಏಪ್ರಿಲ್ 2013, 19:59 IST

ಮುಂಬೈ (ಪಿಟಿಐ): ರೇವ್ ಪಾರ್ಟಿಯಲ್ಲಿ ಪಾಲ್ಗೊಂಡ ಆರೋಪಕ್ಕೆ ಗುರಿಯಾಗಿರುವ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ವೇಯ್ನ ಪಾರ್ನೆಲ್ ಅವರಿಗೆ ಜಾಮೀನು ಲಭಿಸಿದೆ.

ಐಪಿಎಲ್ ಟೂರ್ನಿಯ ಐದನೇ ಆವೃತ್ತಿ ವೇಳೆ ಪುಣೆ ವಾರಿಯರ್ಸ್ ತಂಡದ ಆಟಗಾರರಾದ ಪಾರ್ನೆಲ್ ಹಾಗೂ ಲೆಗ್ ಸ್ಪಿನ್ನರ್ ರಾಹುಲ್ ಶರ್ಮ ರೇವ್ ಪಾರ್ಟಿಯಲ್ಲಿ ಪಾಲ್ಗೊಂಡು ಮಾದಕ ವಸ್ತು ಸೇವಿಸಿದ ಆರೋಪಕ್ಕೆ ಗುರಿಯಾಗಿದ್ದರು.

ಈ ಸಂಬಂಧ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಅಷ್ಟು ಮಾತ್ರವಲ್ಲದೇ, ಪಾರ್ನೆಲ್ ಬಂಧನಕ್ಕೆ ಬಲೆ ಬೀಸಿದ್ದರು.
ಆದರೆ ಪಾರ್ನೆಲ್ ಸೋಮವಾರ  ಸ್ಥಳೀಯ ನ್ಯಾಯಾಲಯಕ್ಕೆ ಆಗಮಿಸಿ ಜಾಮೀನು ಪಡೆದುಕೊಂಡರು. ಅದಕ್ಕಾಗಿ ಅವರು 10 ಸಾವಿರ ರೂಪಾಯಿ ಕಟ್ಟಿದರು.

ಮುಂಬೈನ ಜುಹೂ ಬೀಚ್ ಪ್ರದೇಶದಲ್ಲಿನ ಓಕ್ಸ್‌ವುಡ್ ಪ್ರಿಮೀಯರ್ ಹೋಟೆಲ್‌ನಲ್ಲಿ ಮೇನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು ಎಂಬ ಆರೋಪದ ಮೇಲೆ ಇವರಿಬ್ಬರನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು. ಅಷ್ಟು ಮಾತ್ರವಲ್ಲದೇ, ಇವರಿಬ್ಬರನ್ನು ಮಾದಕ ವಸ್ತು ಸೇವನೆ ಪರೀಕ್ಷೆಗೆ ಒಳಪಡಿಸಿದ್ದರು. ಮದ್ದು ಸೇವಿಸಿರುವುದು ಇದರಿಂದ ಸಾಬೀತಾಗಿತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.