ADVERTISEMENT

ಪ್ರವೀಣ್ ಚೇತರಿಕೆ ಅನುಮಾನ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 19:10 IST
Last Updated 2 ಫೆಬ್ರುವರಿ 2011, 19:10 IST

ನವದೆಹಲಿ (ಪಿಟಿಐ): ವೇಗದ ಬೌಲರ್ ಪ್ರವೀಣ್ ಕುಮಾರ್ ಅವರು ವಿಶ್ವಕಪ್ ಆರಂಭದ ಹೊತ್ತಿಗೆ ಸಂಪೂರ್ಣವಾಗಿ ಚೇತರಿಸಿಕೊಳ್ಳುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಆದ್ದ ರಿಂದ ಕೇರಳದ ವೇಗಿ ಎಸ್. ಶ್ರೀಶಾಂತ್‌ಗೆ ತಂಡದಲ್ಲಿ ಸ್ಥಾನ ಸಿಗುವುದೆನ್ನುವ ಗಾಳಿಯೂ ಬಲವಾಗಿ ಬೀಸತೊಡಗಿದೆ.

ಕಳೆದ ರಾತ್ರಿಯಷ್ಟೇ ಪ್ರವೀಣ್ ತಾವು ಆಡಲು ಸಜ್ಜಾಗುವುದಾಗಿ ವಿಶ್ವಾಸದಿಂದ ಹೇಳಿದ್ದರು. ಆದರೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾತ್ರ ಅಷ್ಟೊಂದು ವಿಶ್ವಾಸ ಹೊಂದಿಲ್ಲ. ವೇಗದಬೌಲರ್ ನೆರವು ತಂಡಕ್ಕೆ ಅಗತ್ಯವಾಗಿದೆ. ಆದ್ದರಿಂದ ಬಿಸಿಸಿಐ ಅಧಿಕಾರಿಗಳು ಕೂಡ ಈ ಯುವ ಕ್ರಿಕೆಟಿಗ ಬೇಗ ಚೇತರಿಸಿಕೊಳ್ಳಲೆಂದು ಹಾರೈಸಿದ್ದಾರೆ.

ಬಿಸಿಸಿಐ ಅಧಿಕಾರಿಗಳು ಪ್ರವೀಣ್ ಗಾಯದ ಬಗ್ಗೆ ವೈದ್ಯರಿಂದ ಸಿಕ್ಕಿರುವ ಮಾಹಿತಿಯನ್ನು ಕೂಡ ಗುಟ್ಟಾಗಿಟ್ಟಿದ್ದಾರೆ. ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ನೋವಿನಿಂದ ಮುಕ್ತವಾಗುವಂಥ ವ್ಯಾಯಾಮ ಮಾಡುವಲ್ಲಿ ನಿರತರಾಗಿರುವ ಬೌಲರ್ ಮಾತ್ರ ‘ಚೇತರಿಕೆಯ ಹಾದಿ ಹಿಡಿದಿದ್ದೇನೆ’ ಎಂದು ತಿಳಿಸಿದ್ದಾರೆ. ಾಯಗೊಂಡಿರುವ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಹಾಗೂ ಗೌತಮ್ ಗಂಭೀ ರ್ ಅವರು ಮಹತ್ವದ ಟೂರ್ನಿಯ ಹೊತ್ತಿಗೆ ಎಷ್ಟರ ಮಟ್ಟಿಗೆ ಚೇತರಿಸಿ ಕೊಳ್ಳುತ್ತಾರೆ ಎನ್ನುವುದೂ ಬಿಸಿಸಿಐ ಚಿಂತೆಯ ಸುಳಿಯಲ್ಲಿ ಸಿಲುಕುವಂತೆ ಮಾಡಿದೆ.

ಫೆಬ್ರುವರಿ 13ರಂದು ಬೆಂಗ ಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣ ದಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯಕ್ಕೂ ಮುನ್ನವೇ ಪ್ರವೀಣ್ ಅವರನ್ನು ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಒಳಪ ಡಿಸಲು ಕ್ರಿಕೆಟ್ ಮಂಡಳಿ ಯೋಚಿಸು ತ್ತಿದೆ.

ಫೆ.9ರಿಂದ ಉದ್ಯಾನನಗರಿಯ ಲ್ಲಿಯೇ ಭಾರತ ತಂಡದ ದೈಹಿಕ ತರಬೇತಿ ಶಿಬಿರ ನಡೆಯಲಿದೆ. ಇದು ಗಾಯಾಳು ಆಟಗಾರರು ಚೇತರಿಸಿ ಕೊಳ್ಳಲು ಸಹಕಾರಿ ಆಗುತ್ತದೆಂದು ನಿರೀಕ್ಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.