ADVERTISEMENT

ಫಿಫಾ ವಿಶ್ವಕಪ್‌ 2018: ‘ಪೋಗ್ಬಾ ಮೋಡಿ ಮಾಡಬಲ್ಲರು’

ಫ್ರಾನ್ಸ್‌ನ ಹಿರಿಯ ಆಟಗಾರ ಬಕಾರಿ ಸಗ್ನಾ ಅನಿಸಿಕೆ

ಏಜೆನ್ಸೀಸ್
Published 12 ಜೂನ್ 2018, 19:30 IST
Last Updated 12 ಜೂನ್ 2018, 19:30 IST
ಪಾಲ್‌ ಪೋಗ್ಬಾ
ಪಾಲ್‌ ಪೋಗ್ಬಾ   

ಲಂಡನ್‌ (ರಾಯಿಟರ್ಸ್‌): ‘ಫ್ರಾನ್ಸ್‌ ತಂಡದ ಮಿಡ್‌ಫೀಲ್ಡರ್‌ ಪಾಲ್‌ ಪೋಗ್ಬಾ ಅವರು ರಷ್ಯಾದಲ್ಲಿ ನಡೆಯುವ ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಮೋಡಿ ಮಾಡಲಿದ್ದಾರೆ’ ಎಂದು ಫ್ರಾನ್ಸ್‌ನ ಹಿರಿಯ ಆಟಗಾರ ಬಕಾರಿ ಸಗ್ನಾ ತಿಳಿಸಿದ್ದಾರೆ.

ಈ ಬಾರಿಯ ಪ್ರೀಮಿಯರ್‌ ಲೀಗ್‌ನಲ್ಲಿ ಮ್ಯಾಂಚೆಸ್ಟರ್‌ ಯುನೈಟೆಡ್‌ ಪರ ಆಡಿದ್ದ ಪೋಗ್ಬಾ, 27 ಪಂದ್ಯಗಳಿಂದ ಆರು ಗೋಲುಗಳನ್ನು ದಾಖಲಿಸಿದ್ದರು.

‘ಪೋಗ್ಬಾ ಪ್ರತಿಭಾನ್ವಿತ ಆಟಗಾರ. ಆಕ್ರಮಣಕಾರಿ ಗುಣ ಹೊಂದಿರುವ ಅವರು ಸುಲಭವಾಗಿ ಎದುರಾಳಿಗಳ ರಕ್ಷಣಾ ಕೋಟೆ ಭೇದಿಸಿ ಚೆಂಡನ್ನು ಗುರಿ ಸೇರಿಸಬಲ್ಲರು’ ಎಂದು ನುಡಿದಿದ್ದಾರೆ.

ADVERTISEMENT

ಜೂನ್‌ 16ರಂದು ನಡೆಯುವ ‘ಸಿ’ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಫ್ರಾನ್ಸ್‌ ತಂಡ ಆಸ್ಟ್ರೇಲಿಯಾ ಎದುರು ಸೆಣಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.