ADVERTISEMENT

ಫುಟ್‌ಬಾಲ್‌: ಆಸ್ಟ್ರೇಲಿಯಾಗೆ ಜಯ

ಪಿಟಿಐ
Published 1 ಜೂನ್ 2018, 19:30 IST
Last Updated 1 ಜೂನ್ 2018, 19:30 IST
ಆಸ್ಟ್ರೇಲಿಯಾ (ಹಳದಿ ಪೋಷಾಕು) ಮತ್ತು ಜೆಕ್‌ ಗಣರಾಜ್ಯದ ಆಟಗಾರರ ಪೈಪೋಟಿಯ ಕ್ಷಣ ರಾಯಿಟರ್ಸ್‌ ಚಿತ್ರ
ಆಸ್ಟ್ರೇಲಿಯಾ (ಹಳದಿ ಪೋಷಾಕು) ಮತ್ತು ಜೆಕ್‌ ಗಣರಾಜ್ಯದ ಆಟಗಾರರ ಪೈಪೋಟಿಯ ಕ್ಷಣ ರಾಯಿಟರ್ಸ್‌ ಚಿತ್ರ   

ಪರುಗ್ವೆ: ಆಸ್ಟ್ರೇಲಿಯಾ ಫುಟ್‌ಬಾಲ್‌ ತಂಡದವರು ಫಿಫಾ ವಿಶ್ವಕಪ್‌ ಅಭ್ಯಾಸ ಪಂದ್ಯದಲ್ಲಿ ಗೆದ್ದಿದ್ದಾರೆ.

ಎನ್‌.ವಿ.ಅರೆನಾದಲ್ಲಿ ಶುಕ್ರವಾರ ನಡೆದ ಹಣಾಹಣಿಯಲ್ಲಿ ಆಸ್ಟ್ರೇಲಿಯಾ 4–0 ಗೋಲುಗಳಿಂದ ಜೆಕ್‌ ಗಣರಾಜ್ಯ ತಂಡವನ್ನು ಪರಾಭವಗೊಳಿಸಿತು. ಈ ಮೂಲಕ ಎರಡು ವರ್ಷಗಳ ನಂತರ ವಿದೇಶಿ ಅಂಗಳದಲ್ಲಿ ಪಂದ್ಯ ಗೆದ್ದ ಹಿರಿಮೆ ತನ್ನದಾಗಿಸಿಕೊಂಡಿತು.

ಆರಂಭದಿಂದಲೇ ಚುರುಕಿನ ಆಟ ಆಡಿದ ತಂಡಕ್ಕೆ 32ನೇ ನಿಮಿಷದಲ್ಲಿ ಮ್ಯಾಥ್ಯೂ ಲೆಕಿ ಮುನ್ನಡೆ ತಂದುಕೊಟ್ಟರು.

ADVERTISEMENT

52ನೇ ನಿಮಿಷದಲ್ಲಿ ಆ್ಯಂಡ್ರ್ಯೂ ನಬೌಟ್‌ ಮೋಡಿ ಮಾಡಿದರು. ಸಹ ಆಟಗಾರ ಒದ್ದು ಕಳುಹಿಸಿದ ಚೆಂಡನ್ನು ಅವರು ಚುರುಕಾಗಿ ಗುರಿ ತಲುಪಿಸಿದರು.

72ನೇ ನಿಮಿಷದಲ್ಲಿ ಲೆಕಿ ಮತ್ತೊಮ್ಮೆ ಕಾಲ್ಚಳಕ ತೋರಿದರು. ವೈಯಕ್ತಿಕ ಎರಡನೇ ಗೋಲು ದಾಖಲಿಸಿದ ಅವರು ಮುನ್ನಡೆಯನ್ನು 3–0ಗೆ ಹೆಚ್ಚಿಸಿದರು.

80ನೇ ನಿಮಿಷದಲ್ಲಿ ಜೆಕ್‌ ಗಣರಾಜ್ಯ ತಂಡದ ಜೇಕಬ್‌ ಜುಗಾಸ್‌ ತಮ್ಮದೇ ಗೋಲು ಪೆಟ್ಟಿಗೆಯೊಳಗೆ ಚೆಂಡನ್ನು ಒದ್ದರು. ಹೀಗಾಗಿ ಆಸ್ಟ್ರೇಲಿಯಾದ ಖಾತೆಗೆ ‘ಉಡುಗೊರೆ’ ರೂಪದಲ್ಲಿ ಗೋಲು ಸೇರ್ಪಡೆಯಾಯಿತು.

ಆಸ್ಟ್ರೇಲಿಯಾ ತಂಡದವರು ಜೂನ್ 9ರಂದು ನಡೆಯುವ ಹೋರಾಟದಲ್ಲಿ ಹಂಗರಿ ವಿರುದ್ಧ ಸೆಣಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.