ADVERTISEMENT

ಫುಟ್‌ಬಾಲ್: ಕರ್ನಾಟಕಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 1 ಮೇ 2014, 19:30 IST
Last Updated 1 ಮೇ 2014, 19:30 IST
ಅಸ್ಸಾಂನ ದಿಬ್ರುಗಾರ್‌ನಲ್ಲಿ ನಡೆಯುತ್ತಿರುವ ಸೀನಿಯರ್‌ ರಾಷ್ಟ್ರೀಯ ಮಹಿಳಾ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಗುರುವಾರ ದೆಹಲಿ (ಎಡ) ಮತ್ತು ತ್ರಿಪುರ ಆಟಗಾರ್ತಿಯರು ಚೆಂಡನ್ನು ನಿಯಂತ್ರಣಕ್ಕೆ ಪಡೆಯಲು ಯತ್ನಿಸಿದರು 	–ಪಿಟಿಐ ಚಿತ್ರ
ಅಸ್ಸಾಂನ ದಿಬ್ರುಗಾರ್‌ನಲ್ಲಿ ನಡೆಯುತ್ತಿರುವ ಸೀನಿಯರ್‌ ರಾಷ್ಟ್ರೀಯ ಮಹಿಳಾ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಗುರುವಾರ ದೆಹಲಿ (ಎಡ) ಮತ್ತು ತ್ರಿಪುರ ಆಟಗಾರ್ತಿಯರು ಚೆಂಡನ್ನು ನಿಯಂತ್ರಣಕ್ಕೆ ಪಡೆಯಲು ಯತ್ನಿಸಿದರು –ಪಿಟಿಐ ಚಿತ್ರ   

ದಿಬ್ರುಗಾರ್‌, ಅಸ್ಸಾಂ: ಕರ್ನಾಟಕ ತಂಡ ಇಲ್ಲಿ ನಡೆಯುತ್ತಿರುವ 20ನೇ ಸೀನಿಯರ್‌ ರಾಷ್ಟ್ರೀಯ ಮಹಿಳಾ ಫುಟ್‌ಬಾಲ್‌ ಚಾಂಪಿಯನ್‌ ಷಿಪ್‌ನ ಪಂದ್ಯದಲ್ಲಿ ಗೆಲುವು ಪಡೆದಿದ್ದಾರೆ.

ಬುಧವಾರ ನಡೆದ ಪಂದ್ಯದಲ್ಲಿ ಕರ್ನಾಟಕದ ಆಟಗಾರ್ತಿಯರು 8–1 ಗೋಲುಗಳಿಂದ ಗುಜರಾತ್‌ ತಂಡವನ್ನು ಮಣಿಸಿದರು.
ಕರ್ನಾಟಕ ತಂಡದ ನಾಯಕಿ ಅಮೂಲ್ಯ ಮೂರು, ಪರೋಮಿತಾಕ್‌ ಎರಡು, ಸಿಮ್ರಾನ್‌ ಒಂದು ಮತ್ತು ಮಧುಬಾಲಾ ಎರಡು ಗೋಲು ಗಳಿಸಿ ಗೆಲುವಿಗೆ ಕಾರಣರಾದರು. ಗುಜರಾತ್‌ ತಂಡದ ಮಾನ್ಸಿ ಒಂದು ಗೋಲು ತಂದಿತ್ತರು.

ಕರ್ನಾಟಕ ಶುಕ್ರವಾರ ನಡೆಯಲಿ ರುವ ಪಂದ್ಯದಲ್ಲಿ ಒಡಿಶಾದ ಎದುರು ಪೈಪೋಟಿ ನಡೆಸಲಿದೆ. ನಂತರ ಗೋವಾ, ಮಿಜೋರಾಂ ಮತ್ತು ಹರಿಯಾಣ ತಂಡಗಳ ಸವಾಲನ್ನು ಎದುರಿಸಲಿದೆ.

ದೆಹಲಿಯ ಮೂರನೇ ಜಯ (ಪಿಟಿಐ ವರದಿ): ಗೆಲುವಿನ ಓಟ ಮುಂದುವರಿಸಿರುವ ದೆಹಲಿಯ ವನಿತೆಯರು ಸತತ ಮೂರನೇ ಗೆಲುವು ಪಡೆದಿದ್ದಾರೆ. ಗುರುವಾರ ನಡೆದ ಪಂದ್ಯದಲ್ಲಿ ದೆಹಲಿ 3–1 ಗೋಲುಗಳಿಂದ ತ್ರಿಪುರ ಎದುರು ಗೆಲುವು ಸಾಧಿಸಿತು. ವಿಜಯೀ ತಂಡದ ನಾಯಕಿ ಬಿ. ಜ್ಯೋತಿ 28ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ಉಳಿದ ಗೋಲುಗಳನ್ನು ದಾಲಿಮಾ ಚಿಬ್ಬರ್‌ (43ನೇ ನಿಮಿಷ) ಮತ್ತು ಉಷಾ (61ನೇ ನಿ.) ಗೋಲು ಕಲೆ ಹಾಕಿ ಗೆಲುವಿನ ರೂವಾರಿ ಎನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.