ಗೋಲ್ಡ್ ಕೋಸ್ಟ್: ಭಾರತದ ಅಮಿತ್ ಹಾಗೂ ನಮನ್ ತನ್ವರ್ ಅವರು ಕಾಮನ್ವೆಲ್ತ್ ಕ್ರೀಡಾಕೂಟದ ಪುರುಷರ ಬಾಕ್ಸಿಂಗ್ನಲ್ಲಿ ಮಂಗಳವಾರ ಸೆಮಿ ಫೈನಲ್ ಪ್ರವೇಶಿಸಿದ್ದು, ಪದಕದ ಭವರಸೆ ಮೂಡಿಸಿದ್ದಾರೆ.
ಮಂಗಳವಾರ ನಡೆದ ಪುರುಷರ 49 ಕೆ.ಜಿ ವಿಭಾಗದ ಕ್ವಾರ್ಟರ್ ಫೈನಲ್ನಲ್ಲಿ ಭಾರತದ ಅಮಿತ್ 4-0ಯಿಂದ ಸ್ಕಾಟ್ಲೆಂಡ್ನ ಅಕ್ವೀಲ್ ಅಹಮದ್ ಅವರನ್ನು ಸೋಲಿಸಿದರು.
ಪುರುಷರ 91 ಕೆ.ಜಿ. ವಿಭಾಗದ ಕ್ವಾರ್ಟರ್ ಫೈನಲ್ನಲ್ಲಿ ನಮನ್ ತನ್ವರ್ 5–0ಯಿಂದ ಫ್ರಾಂಕ್ ಮಸೊಯೆ ಅವರನ್ನು ಸೋಲಿಸಿದರು.
ಈ ಕ್ರೀಡಾಕೂಟದಲ್ಲಿ ಭಾರತ ಈವರೆಗೆ 11 ಚಿನ್ನ, 4 ಬೆಳ್ಳಿ, 5 ಕಂಚು ಸೇರಿದಂತೆ ಒಟ್ಟು 20 ಪದಕಗಳನ್ನು ಗಳಿಸಿ ಮೂರನೇ ಸ್ಥಾನದಲ್ಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.