ADVERTISEMENT

ಬಾಕ್ಸಿಂಗ್: ಬೆಳ್ಳಿಗೆ ತೃಪ್ತಿ ಪಟ್ಟ ಶಿವ ಥಾಪಾ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2012, 19:30 IST
Last Updated 25 ಮಾರ್ಚ್ 2012, 19:30 IST

ನವದೆಹಲಿ (ಪಿಟಿಐ): ಭಾರತದ ಶಿವ ಥಾಪಾ ಜೆಕ್ ಗಣರಾಜ್ಯದ ಉಸ್ತಿ ನಾದ್ ಲಬೆಮ್‌ನಲ್ಲಿ ನಡೆದ 43ನೇ ಗ್ರ್ಯಾನ್ ಪ್ರಿ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ 56 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದರು.

ಫೈನಲ್ ಪಂದ್ಯದಲ್ಲಿ ಗೆಲುವು ಪಡೆದು ಚಿನ್ನ ಜಯಿಸಬೇಕೆನ್ನುವ ಥಾಪಾ ಕನಸು ಕೈಗೂಡಲಿಲ್ಲ. ಅವರು 7-10ರಲ್ಲಿ ವಿಕ್ಟೋರಿಯಾ ಜಾಹ್ನ್ ಎದುರು ಸೋಲು ಕಂಡರು. ಕಜಕಸ್ತಾನದಲ್ಲಿ ನಡೆಯುವ ಏಷ್ಯನ್ ಒಲಿಂಪಿಕ್ಸ್ ಅರ್ಹತಾ ಟೂರ್ನಿಯಲ್ಲಿ ಪಾಲ್ಗೊಳ್ಳಲು ಥಾಪಾ ಈಗಾಗಲೇ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಸೆಮಿಫೈನಲ್‌ನಲ್ಲಿ ಶಿವ 9-5ರಲ್ಲಿ ಜೆಕ್ ಗಣರಾಜ್ಯದ ಪ್ಯಾಟ್ರಿಕ್ ವೆಲ್ಕಿ ವಿರುದ್ಧ ಜಯಿಸಿ ಫೈನಲ್ ಪ್ರವೇಶಿಸಿದ್ದರು.
ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ ಜಯಿಸಿದ್ದ ವಿಕಾಸ್ ಕೃಷ್ಣನ್ 69 ಕೆ.ಜಿ. ವಿಭಾಗದ ಸ್ಪರ್ಧೆಯ ಸೆಮಿಫೈನಲ್ ಸೋಲು ಕಂಡು ಕಂಚಿನ ಪದಕವನ್ನು ಜಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.