ADVERTISEMENT

'ಬಾಪ್ ಕೌನ್ ಹೈ' ಎಂದು ಕೂಗಿ ಗೇಲಿ ಮಾಡಿದ ಪಾಕ್ ಅಭಿಮಾನಿಗಳ ವಿರುದ್ಧ ಸಿಡಿಮಿಡಿಗೊಂಡ ಶಮಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2017, 14:32 IST
Last Updated 19 ಜೂನ್ 2017, 14:32 IST
'ಬಾಪ್ ಕೌನ್ ಹೈ' ಎಂದು ಕೂಗಿ ಗೇಲಿ ಮಾಡಿದ ಪಾಕ್ ಅಭಿಮಾನಿಗಳ ವಿರುದ್ಧ ಸಿಡಿಮಿಡಿಗೊಂಡ ಶಮಿ
'ಬಾಪ್ ಕೌನ್ ಹೈ' ಎಂದು ಕೂಗಿ ಗೇಲಿ ಮಾಡಿದ ಪಾಕ್ ಅಭಿಮಾನಿಗಳ ವಿರುದ್ಧ ಸಿಡಿಮಿಡಿಗೊಂಡ ಶಮಿ   

ಲಂಡನ್: ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಫೈನಲ್‍ನಲ್ಲಿ ಭಾರತವನ್ನು ಸೋಲಿಸಿ ಪಾಕಿಸ್ತಾನ ಟ್ರೋಫಿ ಗೆದ್ದಾಗ ಟೀಂ ಇಂಡಿಯಾದ ಆಟಗಾರರನ್ನು ಗೇಲಿ ಮಾಡಿದ ಪಾಕ್ ಅಭಿಮಾನಿಗಳ ವಿರುದ್ಧ ವೇಗಿ ಮೊಹಮ್ಮದ್‌ ಶಮಿ ಸಿಡಿಮಿಡಿಗೊಂಡಿದ್ದಾರೆ.

ಪಂದ್ಯ ಮುಗಿಸಿ ಟೀಂ ಇಂಡಿಯಾ ಆಟಗಾರರು ಡ್ರೆಸ್ಸಿಂಗ್ ರೂಮಿಗೆ ಬರುತ್ತಿದ್ದ ವೇಳೆ, ವಿರಾಟ್ ಕೊಹ್ಲಿಯನ್ನು ಪಾಕ್ ಅಭಿಮಾನಿಗಳು ಗೇಲಿ ಮಾಡಿದ್ದಾರೆ. ನಿಮ್ಮ ಜಂಭ ಇಳಿದು ಹೋಯ್ತು ಎಂದು ಕೊಹ್ಲಿಯನ್ನು ಪಾಕ್ ಅಭಿಮಾನಿಗಳು ಗೇಲಿ ಮಾಡಿದಾಗ ಕೊಹ್ಲಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಆದರೆ ಗ್ಯಾಲರಿಯಲ್ಲಿದ್ದ ಪಾಕ್ ತಂಡದ ಅಭಿಮಾನಿಗಳ ಗುಂಪೊಂದು ಟೀಂ ಇಂಡಿಯಾದ ಆಟಗಾರರಲ್ಲಿ ಬಾಪ್ ಕೌನ್ ಹೈ (ಅಪ್ಪ ಯಾರು?) ಎಂದು ಕೂಗಿ ಕೇಳಿದಾಗ ಮೊಹಮ್ಮದ್ ಶಮಿಗೆ ಸಿಟ್ಟು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಪಾಕ್ ಅಭಿಮಾನಿಗಳ ಪ್ರಶ್ನೆಯಿಂದ ಸಿಡಿಮಿಡಿಗೊಂಡ ಶಮಿ, ಅವರನ್ನು ಬೈಯಲು ಮುಂದಾದಾಗ ಮಹೇಂದ್ರ ಸಿಂಗ್ ದೋನಿ ಮಧ್ಯ ಪ್ರವೇಶಿಸಿ ಶಮಿ ಅವರನ್ನು ಅಲ್ಲಿಂದ ಕರೆದುಕೊಂಡು ಹೋಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.