ADVERTISEMENT

ಬಿಲ್ಲುಗಾರಿಕೆ: ಭಾರತಕ್ಕೆ ಕಂಚು

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2012, 19:30 IST
Last Updated 14 ಏಪ್ರಿಲ್ 2012, 19:30 IST

ಕೋಲ್ಕತ್ತ (ಪಿಟಿಐ): ಭಾರತದ ವನಿತೆಯರು ಷಾಂಘೈನಲ್ಲಿ ನಡೆಯುತ್ತಿರುವ ವಿಶ್ವಕಪ್ ಬಿಲ್ಲುಗಾರಿಕೆ ಒಂದನೇ ಹಂತದಲ್ಲಿ ಕಂಚಿನ ಪದಕ ಗಳಿಸಿದರು.

ದೀಪಿಕಾ ಕುಮಾರಿ, ಲೈಶ್ರಾಮ್ ದೇವಿ, ಚೆಕ್ರೊವೊಲು ಸ್ವುರೊ ಉತ್ತಮ ಸಾಮರ್ಥ್ಯವನ್ನೇ ತೋರಿದರಾದರೂ, ಕೊನೆಗೆ ಕೊರಿಯಾ ಎದುರು 212-222ರಿಂದ ನಿರಾಸೆ ಅನುಭವಿಸಿದರು.

ಪುರುಷರ ವಿಭಾಗದಲ್ಲಿ ತರುಣ್‌ದೀಪ್ ರಾಯ್, ಜಯಂತ ತಾಲೂಕ್ದಾರ್, ರಾಹುಲ್ ಬ್ಯಾನರ್ಜಿ ಎಂಟರ ಘಟ್ಟದಲ್ಲೇ ಸೋತು ನಿರ್ಗಮಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.