ADVERTISEMENT

ಬೀಚ್ ಗೇಮ್ಸ: ಭಾರತಕ್ಕೆ ಐದು ಪದಕ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2011, 19:30 IST
Last Updated 10 ಅಕ್ಟೋಬರ್ 2011, 19:30 IST

ಕೊಲಂಬೊ (ಪಿಟಿಐ): ಮಿಂಚಿನ ಪ್ರದರ್ಶನ ನೀಡಿದ ಭಾರತ ತಂಡದವರು ಇಲ್ಲಿನ ಹಂಬಂಟೋಟಾದಲ್ಲಿ ನಡೆಯುತ್ತಿರುವ ಚೊಚ್ಚಲ ಸೌತ್ ಏಷ್ಯನ್ ಬೀಚ್ ಕ್ರೀಡಾಕೂಟದ ಮೂರನೇ ದಿನದ ಅಂತ್ಯಕ್ಕೆ ಒಟ್ಟು ಐದು ಪದಕಗಳನ್ನು ಜಯಿಸಿದರು.

ಕ್ರೀಡಾಕೂಟದ ಮೂರನೇ ದಿನವಾದ ಸೋಮವಾರ ಭಾರತಕ್ಕೆ ಎರಡು ಚಿನ್ನ ಹಾಗೂ ಮೂರು ಬೆಳ್ಳಿ ಪದಕ ಲಭಿಸಿದವು.

ಪುರುಷರ ವಿಭಾಗದ ಫುಟ್‌ಬಾಲ್‌ನಲ್ಲಿ ಭಾರತ 19-13ರಲ್ಲಿ ಮಾಲ್ಡೀವ್ಸ್ ಎದುರು ಗೆಲುವು ಪಡೆಯಿತು.
ಮಿಂಚಿನ ಪ್ರದರ್ಶನ ನೀಡಿದ ಭಾರತದ ಪುರುಷ ಹಾಗೂ ಮಹಿಳಾ ಕಬಡ್ಡಿ ತಂಡದವರು ಸಹ ಗೆಲುವು ಪಡೆದರು. ಮಹಿಳಾ ತಂಡ 57-27ರಲ್ಲಿ ಬಾಂಗ್ಲಾದೇಶದ ಮೇಲೂ ಗೆಲುವು ಪಡೆದು ಚಾಂಪಿಯನ್ ಆದರು. ಪುರುಷ ತಂಡ 66-23ರಲ್ಲಿ ನೇಪಾಳ್ ವಿರುದ್ಧವೂ ಗೆಲುವು ಪಡೆಯಿತು. ಆದರೆ ಲೀಗ್ ಹಂತದ ಪಂದ್ಯದಲ್ಲಿ ಭಾರತ  27-32ರಲ್ಲಿ ಪಾಕಿಸ್ತಾನದ ಎದುರು ಸೋಲು ಕಂಡಿತು.

ADVERTISEMENT

ಜಸ್ವಿಂದರ್ ಸಿಂಗ್ ಬಾಥ್ ಮತ್ತು ಜಸ್ವಿಂದರ್ ಸಿಂಗ್ ಈಕ್ವೆಷ್ಟ್ರಿಯನ್ ಸ್ಪರ್ಧೆಯ ಲ್ಯಾನ್ಸೊ ವಿಭಾಗದಲ್ಲಿ ಚಿನ್ನ ಗೆದ್ದರು. ಜಸ್ವಿಂದರ್ ಸಿಂಗ್ ರಿಂಗ್ ಮತ್ತು ಪೆಗ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡರು.

5 ಕಿ.ಮೀ. ಓಪನ್ ವಾಟರ್ ಮ್ಯಾರಥಾನ್ ಈಜು ಸ್ಪರ್ಧೆಯಲ್ಲಿ ಮೊದಲ ಎರಡು ಸ್ಥಾನಗಳು ಭಾರತದ ಪಾಲಾದವು. ಮೆರ್ವಿನ್ ರಾಕ್ ಚೇನ್ (1:05.59ಸೆ) ಹಾಗೂ ಮಂದಾ ಡೇವಿಸ್ (1:06.36) ಸೆಕೆಂಡ್‌ಗಳಲ್ಲಿ ನಿಗದಿತ ಗುರಿ ಮಟ್ಟಿದರು. ಈ ಮೂಲಕ ಪದಕ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನ ಪಡೆದುಕೊಂಡಿತು.

ಬೀಚ್ ಬ್ಯಾಸ್ಕೆಟ್‌ಬಾಲ್ ಸ್ಪರ್ಧೆಯಲ್ಲಿಯೂ ಪಾರಮ್ಯ ಮೆರೆದ ಭಾರತದ ಪುರುಷ ಹಾಗೂ ಮಹಿಳೆಯರ ವಿಭಾಗದ ಸ್ಪರ್ಧಿಗಳು ಚಿನ್ನದ ಪದಕ ಮುಡಿಗೇರಿಸಿಕೊಂಡರು. ಪುರುಷರ ತಂಡ 19-13ರಲ್ಲಿ ಮಾಲ್ಡೀವ್ಸ್ ಮೇಲೂ, ಮಹಿಳಾ ತಂಡ 21-3ರಲ್ಲಿ ಮಾಲ್ಡೀವ್ಸ್ ವಿರುದ್ಧವೂ ಜಯ ಪಡೆದರು. ಮಹಿಳೆಯರ ವಿಭಾಗದ ಬೀಚ್ ವಾಲಿಬಾಲ್‌ನ ಪ್ರಾಥಮಿಕ ಸುತ್ತಿನ ಪಂದ್ಯದಲ್ಲಿ ಭಾರತ 21-15, 16-21, 15-5ರಲ್ಲಿ ಮಾಲ್ಡೀವ್ಸ್ ವಿರುದ್ಧ ಜಯ ಸಾಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.