ADVERTISEMENT

ಬೆಂಗಳೂರಿನಲ್ಲಿ ರಾಜ್ಯಮಟ್ಟದ ರಸ್ತೆ ಓಟದ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2011, 19:55 IST
Last Updated 20 ಏಪ್ರಿಲ್ 2011, 19:55 IST

ಬೆಂಗಳೂರು: ಜರಗನಹಳ್ಳಿ ರಾಮಾಂಜನೇಯ ಯೂತ್ ಫೋರಮ್ ಹಾಗೂ ಎ. ಮುನಿಸಂಜೀವಪ್ಪ ಫೌಂಡೇಷನ್ ಸಂಯುಕ್ತ ಆಶ್ರಯದಲ್ಲಿ ನಾಲ್ಕನೇ ವಾರ್ಷಿಕ ರಾಜ್ಯಮಟ್ಟದ ರಸ್ತೆ ಓಟದ ಸ್ಪರ್ಧೆ ಏಪ್ರಿಲ್ 26 ರಂದು ಬೆಳಿಗ್ಗೆ 7-00 ಗಂಟೆಗೆ ಕನಕಪುರ ರಸ್ತೆ ಜರಗನಹಳ್ಳಿಯಲ್ಲಿ ನಡೆಯಲಿದೆ.

ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ 16 ವರ್ಷ ವಯಸ್ಸಿನೊಳಗಿನವರು (3 ಕಿ.ಮೀ. ದೂರ), 13 ವರ್ಷ ವಯಸ್ಸಿನೊಳಗಿನವರು (2 ಕಿ.ಮೀ. ದೂರ) ಹಾಗೂ 10 ವರ್ಷ ವಯಸ್ಸಿನೊಳಗಿನವರು (1 ಕಿ.ಮೀ. ದೂರ) ಸ್ಪರ್ಧೆ ಏರ್ಪಡಿಸಲಾಗಿದೆ. ಹೆಚ್ಚಿನ ವಿವರಗಳಿಗೆ ಎ. ಮುನಿಸಂಜೀವಪ್ಪ ಕೇರಾಫ್ ಅಮಿತ್    ಕಾರ್ಸ್‌, ರಾಜೀವ್ ಗಾಂಧಿ ರಸ್ತೆ, ಜರಗನಹಳ್ಳಿ, ಬೆಂಗಳೂರು-560078 (ಮೊಬೈಲ್ ನಂಬರ್: 9845483344) ಇಲ್ಲಿ ಸಂಪರ್ಕಿಸಲು ಕೋರಲಾಗಿದೆ. ಪ್ರವೇಶ ಪತ್ರಗಳಿಗೆ ಕೊನೆಯ ದಿನಾಂಕ ಏಪ್ರಿಲ್ 25.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.