ADVERTISEMENT

ಬೆಂಗಳೂರು ರೇಸ್ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2013, 19:59 IST
Last Updated 20 ಜುಲೈ 2013, 19:59 IST

ಬೆಂಗಳೂರು: ಭಾರಿ ಮಳೆಯಿಂದಾಗಿ ರೇಸ್ ಟ್ರ್ಯಾಕ್ ಸೂಕ್ತವಿಲ್ಲದ ಕಾರಣ ಶನಿವಾರ ಮತ್ತು ಭಾನುವಾರದ ಬೆಂಗಳೂರು ರೇಸ್‌ಗಳನ್ನು ಮುಂದೂಡಲಾಗಿದೆ.

ಈ ಎರಡು ರೇಸ್ ದಿನಗಳನ್ನು ಕ್ರಮವಾಗಿ ಮಂಗಳವಾರ (ಜುಲೈ 23) ಮತ್ತು ಬುಧವಾರ (ಜು. 24) ನಡೆಸಲಾಗುವುದು. ಈಗಾಗಲೇ ಪ್ರಕಟವಾಗಿರುವ ರೇಸ್ ಕಾರ್ಡ್‌ಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲವೆಂದು ಬೆಂಗಳೂರು ಟರ್ಫ್ ಕ್ಲಬ್ ಪ್ರಕಟಣೆ ತಿಳಿಸಿದೆ.

ಮೈಸೂರು ರೇಸ್ ರದ್ದು: ಮೈಸೂರು ರೇಸ್ ಕ್ಲಬ್ ಆವರಣದಲ್ಲಿರುವ ಕೆಲವು ಕುದುರೆಗಳಿಗೆ ಸೋಂಕು ರೋಗ ಬಂದಿರುವ ಲಕ್ಷಣಗಳು ಕಂಡು ಬಂದಿದೆ. ಇದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಪ್ರಸಕ್ತ ಬೇಸಿಗೆ ಋತುವಿನ ನಾಲ್ಕು ರೇಸ್‌ಗಳನ್ನು ರದ್ದುಪಡಿಸಲಾಗಿದೆ.

ಜುಲೈ 22 ಮತ್ತು 23 ಹಾಗೂ ಆಗಸ್ಟ್ ತಿಂಗಳ 16 ಹಾಗೂ 17 ರಂದು ನಡೆಯಬೇಕಿದ್ದ ರೇಸ್ ದಿನಗಳನ್ನು ರದ್ದುಪಡಿಸಲಾಗಿದೆ ಎಂದು ಮೈಸೂರು ರೇಸ್ ಕ್ಲಬ್ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.