ADVERTISEMENT

ಬೇರೆ ದೇಶಕ್ಕೆ ಆಡುತ್ತೇನೆ: ಶ್ರೀಶಾಂತ್

ಪಿಟಿಐ
Published 21 ಅಕ್ಟೋಬರ್ 2017, 4:31 IST
Last Updated 21 ಅಕ್ಟೋಬರ್ 2017, 4:31 IST
ಎಸ್. ಶ್ರೀಶಾಂತ್
ಎಸ್. ಶ್ರೀಶಾಂತ್   

ಬೆಂಗಳೂರು:  ಭಾರತ ತಂಡದಲ್ಲಿ ಆಡಲು ಅವಕಾಶ ಸಿಗದಿದ್ದರೆ ವಿದೇಶದ ತಂಡದಲ್ಲಿ ಆಡುವ ಸಾಮರ್ಥ್ಯ ನನಗಿದೆ ಎಂದು ಕ್ರಿಕೆಟಿಗ ಎಸ್. ಶ್ರೀಶಾಂತ್ ಅವರು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಸವಾಲು ಹಾಕಿದ್ದಾರೆ.

ಏಷ್ಯಾನೆಟ್ ಟಿ.ವಿ. ಗೆ ನೀಡಿರುವ ಸಂದರ್ಶನದಲ್ಲಿ ಅವರು, ‘ನಾನು ಆಡದಂತೆ ಬಿಸಿಸಿಐ ಆಜೀವ ನಿಷೇಧ ಹೇರಿದೆ. ಅದೊಂದು ಖಾಸಗಿ ಸಂಸ್ಥೆಯಷ್ಟೇ. ಆದರೆ ಐಸಿಸಿ(ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್) ಯಾವುದೇ ನಿಷೇಧ ಹಾಕಿಲ್ಲ. ಆದ್ದರಿಂದ ಬೇರೆ ಯಾವುದೇ ದೇಶದ ತಂಡಕ್ಕೂ ಆಡಲು ಅವಕಾಶ ಇದೆ. ನನಗೀಗ 34 ವರ್ಷ. ಕನಿಷ್ಠ ಇನ್ನೂ ಆರು ವರ್ಷಗಳ ಕಾಲ ಆಡುವ ಸಾಮರ್ಥ್ಯ ಇದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT