ADVERTISEMENT

ಬೇಷರತ್‌ ಕ್ಷಮೆ ಕೋರಿದ ಅನುರಾಗ್

ನ್ಯಾಯಾಂಗ ನಿಂದನೆ ಆರೋಪಕ್ಕೆ ಒಳಗಾಗಿದ್ದ ಠಾಕೂರ್

ಪಿಟಿಐ
Published 13 ಜುಲೈ 2017, 19:30 IST
Last Updated 13 ಜುಲೈ 2017, 19:30 IST
ಅನುರಾಗ್ ಠಾಕೂರ್‌
ಅನುರಾಗ್ ಠಾಕೂರ್‌   

ನವದೆಹಲಿ:  ನ್ಯಾಯಾಂಗ ನಿಂದನೆ ಆರೋಪಕ್ಕೆ ಒಳಗಾಗಿದ್ದ ಬಿಸಿಸಿಐ ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್‌ ಸುಪ್ರೀಂ ಕೋರ್ಟ್‌ನಲ್ಲಿ ಬುಧ ವಾರ ಬೇಷರತ್‌ ಕ್ಷಮೆ ಕೋರಿದ್ದಾರೆ.

ಬಿಸಿಸಿಐಗೆ ಸಂಬಂಧಿಸಿ ನ್ಯಾಯಾಲಯಕ್ಕೆ ಸುಳ್ಳು ಸಾಕ್ಷ್ಯ ಒಳಗೊಂಡ ಅಫಿಡವಿಟ್‌ ಸಲ್ಲಿಸಿದ ಆರೋಪದಡಿ ಠಾಕೂರ್‌ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಾಗಿತ್ತು.

ಈ ಕಾರಣದಿಂದ ಅವರಿಗೆ ನೋಟಿಸ್‌ ಜಾರಿಗೊಳಿಸಿದ ನ್ಯಾಯಾ ಲಯ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಿ ತ್ತು. ಮಾರ್ಚ್‌ನಲ್ಲಿ ನ್ಯಾಯಾ ಲಯದ ಕ್ಷಮೆ ಕೋರಿದ ಠಾಕೂರ್‌ ನ್ಯಾಯಾಂಗ ನಿಂದನೆ ಆರೋಪದಿಂದ ಮುಕ್ತಗೊಳಿಸ ಬೇಕು ಎಂದು ಕೋರಿದ್ದರು.

ADVERTISEMENT

ಈ ಅರ್ಜಿಯನ್ನು ಪರಿಗಣಿಸಬೇಕಾ ದರೆ ಹೊಸತಾಗಿ ಒಂದು ಪುಟದ ಅಫಿಡವಿಟ್ ಸಲ್ಲಿಸುವಂತೆ ಜುಲೈ ಏಳ ರಂದು ನ್ಯಾಯಾಲಯ ಸೂಚಿಸಿತ್ತು. ಜುಲೈ 14ರಂದು ಖುದ್ದಾಗಿ ಹಾಜರಾಗಿ ಕ್ಷಮೆ ಕೋರಬೇಕು ಎಂದೂ ಸೂಚಿಸಿತ್ತು.

ಗುರುವಾರ ಅಫಿಡವಿಟ್ ಸಲ್ಲಿಸಿದ ಠಾಕೂರ್‌ ‘ಉದ್ದೇಶಪೂರ್ವಕವಾಗಿ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಲು ಪ್ರಯತ್ನಿಸಲಿಲ್ಲ. ಅರಿವಿಲ್ಲ ದೆಯೇ ಕೆಲವು ತಪ್ಪುಗಳಾಗಿವೆ. ಮಾಹಿತಿ ವಿನಿಮಯದಲ್ಲಿ ಆಗಿರುವ ವಿಳಂಬವೇ ಇದಕ್ಕೆ ಕಾರಣ. ಇದಕ್ಕಾಗಿ ಬೇಷರತ್ ಕ್ಷಮೆ ಕೋರುತ್ತೇನೆ’ ಎಂದು ಹೇಳಿದ್ದಾರೆ. ಅವರ ಪರವಾಗಿ ಹಿರಿಯ ವಕೀಲ ಪಿ.ಎಸ್‌.ಪಟ್ವಾಲಿಯಾ ಹಾಜರಾಗಿದ್ದರು.

ಬಿಸಿಸಿಐಗೆ ಸಂಬಂಧಿಸಿದ ಪ್ರಕರಣ ವೊಂದರಲ್ಲಿ  ಐಸಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದಿರುವುದಾಗಿ ಹೇಳಿ 2016ರಲ್ಲಿ ಠಾಕೂರ್‌ ಸುಪ್ರೀಂ ಕೊರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದರು. ಠಾಕೂರ್‌ ಅವರನ್ನು ಹುದ್ದೆಯಿಂದ ಕೆಳಗಿ ಳಿಸಿದ ನ್ಯಾಯಾಲಯ ಬಿಸಿಸಿಐ ಆಡಳಿತ ನೋಡಿಕೊಳ್ಳಲು ನಾಲ್ಕು ಮಂದಿಯನ್ನು ಒಳಗೊಂಡ ಆಡಳಿತಾಧಿಕಾರಿಗಳ ಸಮಿತಿಯನ್ನು ನೇಮಕ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.