ಚೆನ್ನೈ (ಪಿಟಿಐ): ಡಬಲ್ಸ್‌ನ ನೂತನ ಜೊತೆಗಾರ ರೋಹನ್ ಬೋಪಣ್ಣ ಜೊತೆ ಉತ್ತಮ ಹೊಂದಾಣಿಕೆ ಸಾಧಿಸಲು ಮುಂಬರುವ ಎಟಿಪಿ ಟೆನಿಸ್ ಟೂರ್ನಿಗಳಲ್ಲಿ ಪ್ರಯತ್ನಿಸುವುದಾಗಿ ಮಹೇಶ್ ಭೂಪತಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಮ್ಮ ಮೊದಲಿನ ಜೊತೆಗಾರ ಲಿಯಾಂಡರ್ ಪೇಸ್ ಅವರಿಂದ 2011ರ ಅಂತ್ಯದಲ್ಲಿ ಭೂಪತಿ ದೂರವಾಗಿದ್ದರು. ಇನ್ನು ಮುಂದೆ ಡಬಲ್ಸ್‌ನಲ್ಲಿ ಜೊತೆಯಾಗಿ ಆಡದಿರಲು ಅವರು ನಿರ್ಧರಿಸಿದ್ದರು. `ನಾನು ಒಲಿಂಪಿಕ್ಸ್‌ನಲ್ಲಿ ಆಡಲು ಭಾರತ ತಂಡದಲ್ಲಿ ಸ್ಥಾನ ಪಡೆದರೆ ಖಂಡಿತ ಬೋಪಣ್ಣ ಜೊತೆಗೂಡಿ ಆಡುತ್ತೇನೆ.
ಆದರೆ ಆ ಬಗ್ಗೆ ನನಗೆ ಇನ್ನೂ ಮಾಹಿತಿ ಇಲ್ಲ. ಹಾಗಾಗಿ ಮುಂದಿನ ಎಟಿಪಿ ಟೂರ್ನಿಗಳಲ್ಲಿ ಬೋಪಣ್ಣ ಜೊತೆಗೂಡಿ ಆಡುತ್ತೇನೆ. ಈಗ ನಾವು ಚೆನ್ನೈ ಓಪನ್ ಟೆನಿಸ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದೇವೆ~ ಎಂದು ಭೂಪತಿ ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.