ನವದೆಹಲಿ (ಪಿಟಿಐ): ಭಾರತದ ಪಿ. ಕಶ್ಯಪ್, ಅಜಯ್ ಜಯರಾಮನ್ ಹಾಗೂ ಸೌರಭ್ ವರ್ಮ ಸ್ವಿಟ್ಜರ್‌ಲೆಂಡ್‌ನ ಬಾಸೆಲ್‌ನಲ್ಲಿ ನಡೆಯುತ್ತಿರುವ ಸ್ವಿಸ್ ಓಪನ್ ಗ್ರ್ಯಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೋಲು ಕಂಡರು.
ಎರಡನೇ ಸುತ್ತಿನ ಪಂದ್ಯದಲ್ಲಿ ಈ ಸ್ಪರ್ಧಿಗಳು ನಿರಾಸೆ ಅನುಭವಿಸಿದರು. ಈ ಮೂಲಕ ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಭಾರತದ ಹೋರಾಟ ತೆರೆ ಕಂಡಿತು.
ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಪೆಡ್ರಾ ಮಾರ್ಟಿನ್ಸ್ 21-16, 21-16ರಲ್ಲಿ ಅಜಯ್ ಎದುರು ಗೆಲುವು ಸಾಧಿಸಿದರು. ಈ ಗೆಲುವಿಗಾಗಿ ಪೆಡ್ರಾ ಒಂದು ಗಂಟೆ 30 ನಿಮಿಷ ಹೋರಾಟ ನಡೆಸಿದರು.
ಪಿ. ಕಶ್ಯಪ್ 13-21, 18-21ರಲ್ಲಿ ಏಳನೇ ಶ್ರೇಯಾಂಕದ ವಿಯೆಟ್ನಾಂನ ತೇಯಿನ್ ಮಿನ್ಹಾ ನುಗ್ವಾಯಿನ್ ಎದುರು ಪರಾಭವಗೊಂಡರು.
ಇನ್ನೊಂದು ಪಂದ್ಯದಲ್ಲಿ ರಾಷ್ಟ್ರೀಯ ಚಾಂಪಿಯನ್ ಸೌರಭ್ ಸಹ ನಿರಾಸೆ ಅನುಭವಿಸಿದರು. ಈ ಆಟಗಾರ 10-21, 9-21ರಲ್ಲಿ 13ನೇ ಶ್ರೇಯಾಂಕದ ವಾನ್ ಹೂ ಶೋನ್ ಎದುರು ಸೋತರು. ಈ ಪಂದ್ಯ 30 ನಿಮಿಷ ನಡೆಯಿತು.
ಮಹಿಳೆಯರ ವಿಭಾಗದ ಸಿಂಗಲ್ಸ್‌ನಲ್ಲಿ ಹೈದರಾಬಾದ್‌ನ ಆಟಗಾರ್ತಿ ಸೈನಾ ನೆಹ್ವಾಲ್ ಪ್ರಶಸ್ತಿ ಜಯಿಸುವ ನೆಚ್ಚಿನ ಆಟಗಾರ್ತಿ ಎನಿಸಿದ್ದಾರೆ. ಡಬಲ್ಸ್‌ನಲ್ಲಿ ರೂಪೇಶ್ ಕುಮಾರ್ ಹಾಗೂ ಸನಾವೇ ಥಾಮಸ್ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.