ADVERTISEMENT

ಬ್ಯಾಡ್ಮಿಂಟನ್: ಪ್ರಧಾನ ಹಂತಕ್ಕೆ ಆನಂದ್ ಪವಾರ್

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2012, 19:00 IST
Last Updated 16 ಅಕ್ಟೋಬರ್ 2012, 19:00 IST

ಒಯೆನ್ಸ್, ಡೆನ್ಮಾರ್ಕ್ (ಪಿಟಿಐ): ಭಾರತದ ಆನಂದ್ ಪವಾರ್ ಇಲ್ಲಿ ನಡೆಯುತ್ತಿರುವ ಡೆನ್ಮಾರ್ಕ್ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಪ್ರಧಾನ ಹಂತ ಪ್ರವೇಶಿಸಿದರು.

ಮಂಗಳವಾರ ನಡೆದ ಮೊದಲ ಪಂದ್ಯದಲ್ಲಿ ಆನಂದ್ 21-7, 21-7 ರಲ್ಲಿ ರಷ್ಯಾದ ಇವಾನ್ ಸೊಜೊನೊವ್ ವಿರುದ್ಧ ಗೆದ್ದರೆ, ಎರಡನೇ ಪಂದ್ಯದಲ್ಲಿ 21-19, 21-16 ರಲ್ಲಿ ಥಾಯ್ಲೆಂಡ್‌ನ ತನೊಸಾಕ್ ಸೇನ್‌ಸೊಮ್‌ಬೂನ್ಸಕ್ ಅವರನ್ನು ಮಣಿಸಿದರು.

ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಆಟಗಾರ್ತಿ ಸೈನಾ ನೆಹ್ವಾಲ್ ಅವರು  ಬುಧವಾರ ಕಣಕ್ಕಿಳಿಯಲಿದ್ದಾರೆ. ಅವರಿಲ್ಲಿ ಮೂರನೇ ಶ್ರೇಯಾಂಕ ಪಡೆದಿದ್ದಾರೆ. ಸೌರಭ್ ವರ್ಮ, ಅಜಯ್ ಜಯರಾಮ್ ಅವರ ಪಂದ್ಯಗಳು ಕೂಡ ಬುಧವಾರ ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.