ADVERTISEMENT

ಬ್ಯಾಡ್ಮಿಂಟನ್ ರೆಫ್ರಿ ಆಗಿ ಸತೀಶ್ ಮಲ್ಯ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2011, 19:30 IST
Last Updated 18 ಮಾರ್ಚ್ 2011, 19:30 IST

ಮಂಗಳೂರು: ಕೆಎಂಸಿ ಮಂಗಳೂರು ದೈಹಿಕ ಶಿಕ್ಷಣ ನಿರ್ದೇಶಕ ಡಾ.ಸತೀಶ್ ಮಲ್ಯ, ಇತ್ತೀಚೆಗೆ ಹರಿಯಾಣದ ರೋಹತಕ್‌ನಲ್ಲಿ  ಭಾರತ ಬ್ಯಾಡ್ಮಿಂಟನ್ ಸಂಸ್ಥೆ ನಡೆಸಿದ ಅಖಿಲ ಭಾರತ ಮಟ್ಟದ ಬ್ಯಾಡ್ಮಿಂಟನ್ ರೆಫ್ರಿ  ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿದ್ದಾರೆ.

ಈ ಲಿಖಿತ ಪರೀಕ್ಷೆಯಲ್ಲಿ ಭಾಗವಹಿಸಿದ ದೇಶದ 30 ಮಂದಿಯಲ್ಲಿ 16 ಮಂದಿ ಉತ್ತೀರ್ಣಗೊಂಡಿದ್ದು ಇವರಲ್ಲಿ ಮಣಿಪಾಲದ ಡಾ.ಮಲ್ಯ ಒಬ್ಬರು. ಕರ್ನಾಟಕದಿಂದ ಈ ಬಾರಿ ಇವರೊಬ್ಬರೇ ಆಯ್ಕೆಯಾಗಿದ್ದಾರೆ.

ಎರಡು ದಶಕದಿಂದ ಅವರು ರಾಷ್ಟ್ರೀಯ ಬ್ಯಾಡ್ಮಿಂಟನ್ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಹಲವು ರಾಷ್ಟ್ರೀಯ, ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ನಿರ್ವಹಣೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.