ADVERTISEMENT

ಬ್ಯಾಡ್ಮಿಂಟನ್‌: ಸೈನಾ, ಶ್ರೀಕಾಂತ್‌ ಮುನ್ನಡೆ

ಪಿಟಿಐ
Published 25 ಏಪ್ರಿಲ್ 2018, 19:30 IST
Last Updated 25 ಏಪ್ರಿಲ್ 2018, 19:30 IST

ವುಹಾನ್‌, ಚೀನಾ (ಪಿಟಿಐ): ಏಷ್ಯನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಸೈನಾ ನೆಹ್ವಾಲ್‌, ಪಿ. ವಿ. ಸಿಂಧು ಹಾಗೂ ಕಿದಂಬಿ ಶ್ರೀಕಾಂತ್‌ ಶುಭಾರಂಭ ಮಾಡಿದ್ದಾರೆ.

ಬುಧವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಸೈನಾ, ಸಿಂಗಪುರದ ಯೊ ಜಿಯಾ ಅವರನ್ನು 21–12, 21–9ರಿಂದ ಮಣಿಸಿದರು. ಪಿ.ವಿ.ಸಿಂಧು, ಚೀನಾದ ಪೈ ಯು ಪೊ ವಿರುದ್ಧ 21–14, 21–19ರಿಂದ ಗೆದ್ದರು.

ಅಗ್ರ ಶ್ರೇಯಾಂಕದ ಶ್ರೀಕಾಂತ್‌, ಜಪಾನ್‌ನ ಕೆಂಟಾ ನಿಶಿಮೋಟೊ ಅವ ರನ್ನು 13–21, 21–16, 21–16ರಿಂದ ಮಣಿಸಿದರು.

ADVERTISEMENT

ಡಬಲ್ಸ್‌ನಲ್ಲಿ ಗೆಲುವು: ಪುರುಷರ ಡಬಲ್ಸ್‌ನಲ್ಲಿ ಎಂ.ಆರ್‌.ಅರ್ಜುನ್‌ ಹಾಗೂ ರಾಮಚಂದ್ರನ್‌ ಶ್ಲೋಕ್‌, ಮಹಿಳಾ ವಿಭಾಗದಲ್ಲಿ ಮೇಘನಾ ಜಕ್ಕಂಪುಡಿ ಹಾಗೂ ಪೂರ್ವಿಶಾ ಎಸ್. ರಾಮ್‌ ಜಯ ಸಾಧಿಸಿ ದ್ದಾರೆ. ಅರ್ಜುನ್‌ ಮತ್ತು ರಾಮಚಂದ್ರನ್‌ ಜೋಡಿ ಕೊರಿಯಾದ ಚುಂಗ್‌ ಯುಯಿ ಸೋಕ್‌ ಮತ್ತು ಕಿಮ್‌ ಡುಕ್‌ಯಂಗ್‌ ಅವರನ್ನು 25–23, 23–21ರಿಂದ ಪರಾಭವಗೊಳಿಸಿದರು. ಮೇಘನಾ ಮತ್ತು ಪೂರ್ವಿಶಾ ಸಿಂಗಪುರದ ಒಂಗ್‌ ರೆನ್‌ ನೆ ಮತ್ತು ವಾಂಗ್‌ ಜಿಯಾ ಯಿಂಗ್‌ ಕ್ರಿಸ್ಟಲ್‌ ಅವರನ್ನು 14–21. 22–20, 21–17ರಿಂದ ಸೋಲಿಸಿದರು.

ಮಿಶ್ರ ಡಬಲ್ಸ್‌ನಲ್ಲಿ ಸೌರಭ್‌ ಶರ್ಮಾ ಮತ್ತು ಅನುಷ್ಕಾ ಪಾರಿಖ್‌ ಜೋಡಿ ನಿರಾಸೆ ಮೂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.