ADVERTISEMENT

ಬ್ರೆಜಿಲ್‌ಗೆ ಜಯದ ಕನಸು

ಪಿಟಿಐ
Published 9 ಅಕ್ಟೋಬರ್ 2017, 19:30 IST
Last Updated 9 ಅಕ್ಟೋಬರ್ 2017, 19:30 IST
ಬ್ರೆಜಿಲ್‌ಗೆ ಜಯದ ಕನಸು
ಬ್ರೆಜಿಲ್‌ಗೆ ಜಯದ ಕನಸು   

ಕೊಚ್ಚಿ: ಮೊದಲ ಪಂದ್ಯದಲ್ಲಿ ಗೆದ್ದು ವಿಶ್ವಾಸದಿಂದ ಬೀಗುತ್ತಿರುವ ಬ್ರೆಜಿಲ್‌ ತಂಡದವರು ಫಿಫಾ 17 ವರ್ಷದೊಳಗಿನವರ ವಿಶ್ವಕಪ್‌ ಫುಟ್‌ಬಾಲ್‌ನಲ್ಲಿ ನಾಕೌಟ್ ಮೇಲೆ ಕಣ್ಣು ನೆಟ್ಟಿದ್ದಾರೆ.

ಮಂಗಳವಾರ ನಡೆಯುವ ‘ಡಿ’ ಗುಂಪಿನ ಪಂದ್ಯದಲ್ಲಿ ಸಾಂಬಾ ನಾಡಿನ ತಂಡ ಉತ್ತರ ಕೊರಿಯಾದ ಸವಾಲಿಗೆ ಎದೆಯೊಡ್ಡಲಿದೆ.

ಆರಂಭಿಕ ಪಂದ್ಯದಲ್ಲಿ ಬ್ರೆಜಿಲ್‌ ತಂಡ 2–1 ಗೋಲುಗಳಿಂದ ಸ್ಪೇನ್ ತಂಡವನ್ನು ಮಣಿಸಿತ್ತು. ವಿಶ್ವಕಪ್‌ನಲ್ಲಿ ನಾಲ್ಕನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಈ ತಂಡದವರು ಆಟದ ಎಲ್ಲಾ ವಿಭಾಗಗಳಲ್ಲೂ ಬಲಿಷ್ಠರಾಗಿದ್ದಾರೆ. ಕೂಟದ ಆರಂಭಕ್ಕೆ 10 ದಿನ ಮುಂಚಿತವಾಗಿಯೇ ಭಾರತಕ್ಕೆ ಬಂದಿದ್ದ ಈ ತಂಡದವರು ಸ್ಥಳೀಯ ವಾತಾವರಣಕ್ಕೆ ಒಗ್ಗಿಕೊಂಡಿದ್ದಾರೆ.

ADVERTISEMENT

ವಿಶ್ವಕಪ್‌ನಲ್ಲಿ ಉಭಯ ತಂಡಗಳು ಇದುವರೆಗೂ ಎರಡು ಬಾರಿ ಮುಖಾಮುಖಿಯಾಗಿದ್ದು, ಎರಡೂ ಪಂದ್ಯಗಳಲ್ಲೂ ಬ್ರೆಜಿಲ್‌ ಗೆದ್ದಿದೆ.  2005ರಲ್ಲಿ ಪೆರುನಲ್ಲಿ ನಡೆದಿದ್ದ ಪಂದ್ಯದಲ್ಲಿ 3–1 ಗೋಲುಗಳಿಂದ ಗೆದ್ದಿದ್ದ ಬ್ರೆಜಿಲ್‌, 2007ರಲ್ಲಿ 6–1ರಿಂದ ಜಯಭೇರಿ ಮೊಳಗಿಸಿತ್ತು. ಹೀಗಾಗಿ ಈ ತಂಡಕ್ಕೆ ಮತ್ತೊಂದು ಗೆಲುವು ಖಚಿತ ಎಂದೇ ಹೇಳಲಾಗುತ್ತಿದೆ.

ಲಿಂಕನ್‌, ಪೌಲಿನ್ಹೊ ಮತ್ತು ಬ್ರೆನೆರ್‌ ಅವರು ರಕ್ಷಣಾ ವಿಭಾಗದಲ್ಲಿ ಈ ತಂಡದ ಬಲ ಎನಿಸಿದ್ದಾರೆ. ಇವರು ಆರಂಭಿಕ ಪಂದ್ಯದಲ್ಲಿ ತಂಡ ಗೆಲುವಿನ ಸಿಹಿ ಸವಿಯುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.