ADVERTISEMENT

ಬ್ರೆಜಿಲ್‌ಗೆ ಆಘಾತ ನೀಡಿದ ಮೆಕ್ಸಿಕೊ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2012, 19:30 IST
Last Updated 11 ಆಗಸ್ಟ್ 2012, 19:30 IST

ಲಂಡನ್ (ಎಎಫ್‌ಪಿ): ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲಬೇಕೆಂಬ ಬ್ರೆಜಿಲ್ ತಂಡದ ಕನಸು ಈ ಬಾರಿಯೂ ಭಗ್ನಗೊಂಡಿದೆ. ಪುರುಷರ ಫುಟ್‌ಬಾಲ್ ಟೂರ್ನಿಯ ಫೈನಲ್‌ನಲ್ಲಿ ಅಮೋಘ ಪ್ರದರ್ಶನ ತೋರಿದ ಮೆಕ್ಸಿಕೊ ಚಿನ್ನದ ಪದಕ ಜಯಿಸಿತು.

ಕಿಕ್ಕಿರಿದು ತುಂಬಿದ್ದ ವೆಂಬ್ಲೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಈ ಪಂದ್ಯದಲ್ಲಿ ಮೆಕ್ಸಿಕೊ 2-1 ಗೋಲುಗಳಿಂದ ಐದು ಬಾರಿಯ ವಿಶ್ವ ಚಾಂಪಿಯನ್ ಬ್ರೆಜಿಲ್‌ಗೆ ಆಘಾತ ನೀಡಿತು. ಈ ಮೂಲಕ ಕೇವಲ ಬೆಳ್ಳಿ ಪದಕಕ್ಕೆ ಬ್ರೆಜಿಲ್ ಸಮಾಧಾನಪಡಬೇಕಾಯಿತು. ಈ ತಂಡದವರು 1988ರ ಸೋಲ್ ಒಲಿಂಪಿಕ್ಸ್‌ನಲ್ಲಿ ಕೂಡ ಫೈನಲ್ ತಲುಪಿದ್ದರು. ಆದರೆ ಆಗ 1-2ರಲ್ಲಿ ಸೋವಿಯತ್ ಒಕ್ಕೂಟದ ಎದುರು ನಿರಾಸೆ ಅನುಭವಿಸಿದ್ದರು.

ಈ ಪಂದ್ಯದ ಗೆಲುವಿನ ಹೀರೊ ಆರ್ಬೆ ಪೆರಾಲ್ಟಾಸ್. ಅವರು ತಂದಿತ್ತ ಎರಡು ಗೋಲುಗಳು ಬ್ರೆಜಿಲ್‌ಗೆ ಆಘಾತ ನೀಡಿದವು. ಹಾಲೆಂಡ್‌ನ ಈ ಸ್ಟ್ರೈಕರ್ ಪಂದ್ಯ ಆರಂಭವಾದ ಕೇವಲ 30 ಸೆಕೆಂಡ್‌ಗಳಲ್ಲಿ ಮೊದಲ ಗೋಲು ಗಳಿಸಿದರು. ಎರಡನೇ ಅವಧಿಯಲ್ಲಿ ಅವರು ಮತ್ತೊಂದು ಗೋಲು ತಂದಿತ್ತರು. 75ನೇ ನಿಮಿಷದಲ್ಲಿ ಅವರು ತಂದಿತ್ತ ಗೋಲು ವೆುಕ್ಸಿಕೊಗೆ 2-1 ಗೋಲುಗಳ ಮುನ್ನಡೆ ದೊರಕಿಸಿ ಕೊಟ್ಟಿತು. ಬ್ರೆಜಿಲ್ ಪರ  ಹಲ್ಕ್ 32ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದ್ದರು.

ಮೆಕ್ಸಿಕೊ ಇದೇ ಮೊದಲ ಬಾರಿ ಒಲಿಂಪಿಕ್ಸ್ ಫೈನಲ್‌ನಲ್ಲಿ ಆಡಲು ಅರ್ಹತೆ ಪಡೆದಿತ್ತು. ಆ ಯತ್ನದಲ್ಲಿಯೇ ಯಶಸ್ವಿಯಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.